ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ: ಅಸ್ಸಾಂಜ್‌ಗೆ ಈಕ್ವೆಡಾರ್ ಆಶ್ರಯ

ಸೋಮವಾರ, ಮೇ 20, 2019
30 °C

ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ: ಅಸ್ಸಾಂಜ್‌ಗೆ ಈಕ್ವೆಡಾರ್ ಆಶ್ರಯ

Published:
Updated:

ಲಂಡನ್ (ಪಿಟಿಐ): ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರಿಗೆ ಮಾನವೀಯ ನೆಲೆಯಲ್ಲಿ ರಾಜಕೀಯ ಆಶ್ರಯ ನೀಡುವುದಾಗಿ ಈಕ್ವೆಡಾರ್‌ ಗುರುವಾರ ತಿಳಿಸಿದೆ.ಈ ಬೆಳವಣಿಗೆಯಿಂದಾಗಿ ಲಂಡನ್ ಮತ್ತು ಈಕ್ವೆಡಾರ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸ್ವೀಡನ್‌ಗೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಅಸ್ಸಾಂಜ್, ಜೂನ್ 19ರಿಂದ ಇಲ್ಲಿನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.`ಅಸ್ಸಾಂಜ್ ಅವರನ್ನು ಸ್ವೀಡನ್‌ನಿಂದ ಅಮೆರಿಕಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಇಲ್ಲಿ ಆಶ್ರಯ ನೀಡಲು ಮುಂದಾಗಿದ್ದೇವೆ~ ಎಂದು ಈಕ್ವೆಡಾರ್ ವಿದೇಶಾಂಗ ಸಚಿವ ರಿಕಾರ್ಡೊ ಪ್ಯಾಟಿನೊ ತಿಳಿಸಿದ್ದಾರೆ.`ಈಕ್ವೆಡಾರ್‌ನ ರಾಯಭಾರ ಕಚೇರಿಯೊಳಗೆ ನುಗ್ಗಿ ಅಸ್ಸಾಂಜ್ ಅವರನ್ನು ಬಂಧಿಸುವ ಅಧಿಕಾರ ತನಗಿದೆ~ ಎಂದು ಈ ಮೊದಲು ಬ್ರಿಟನ್ ಬೆದರಿಕೆ ಹಾಕಿತ್ತು.`ಅಸ್ಸಾಂಜ್‌ಗೆ ರಾಜಕೀಯ ಆಶ್ರಯ ಸಿಕ್ಕಿರುವುದರಿಂದ ನಮ್ಮ ನಿಲುವೇನೂ ಬದಲಾಗುವುದಿಲ್ಲ. ಕಾನೂನು ಪ್ರಕಾರ ನಾವು ಅವರನ್ನು ಅನಿವಾರ್ಯವಾಗಿ ಹಸ್ತಾಂತರ ಮಾಡಲೇಬೇಕಾಗಿದೆ~ ಎಂದು ವಿದೇಶಾಂಗ ಕಚೇರಿ ವಕ್ತಾರೆ ಅಭಿಪ್ರಾಯಪಟ್ಟಿದ್ದಾರೆ.ಬಂಧನ: ಈಕ್ವೆಡಾರ್ ರಾಯಭಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ಅಸ್ಸಾಂಜ್ ಬೆಂಬಲಿಗರು ಘೋಷಣೆಗಳನ್ನು ಕೂಗಿದರು. ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಮೂವರನ್ನು ಬಂಧಿಸಲಾಯಿತು.ವಿಕಿಲೀಕ್ಸ್ ಖಂಡನೆ: ಅಸ್ಸಾಂಜ್ ಅವರನ್ನು ಬಂಧಿಸುವುದಾಗಿ ಬ್ರಿಟನ್ ಒಡ್ಡಿದ ಬೆದರಿಕೆಯನ್ನು ವಿಕಿಲೀಕ್ಸ್ ಖಂಡಿಸಿದೆ.ಹಸ್ತಾಂತರ ಅನಿವಾರ್ಯ

ಲಂಡನ್ (ಪಿಟಿಐ):
  `ಅಸ್ಸಾಂಜ್ ಅವರಿಗೆ ಈಕ್ವೆಡಾರ್ ಆಶ್ರಯ ನೀಡಿದರೂ ನಾವು ಕಾನೂನು ಪ್ರಕಾರ ಅವರನ್ನು ಸ್ವೀಡನ್‌ಗೆ ಹಸ್ತಾಂತರ ಮಾಡುವುದು ಅನಿವಾರ್ಯವಾಗಿದೆ~ ಎಂದು ಅಧಿಕಾರಿಗಳು ಹೇಳಿದ್ದಾರೆ.`ಈಕ್ವೆಡಾರ್ ನಿಲುವಿನಿಂದ  ತೀವ್ರ ನಿರಾಸೆಯಾಗಿದೆ~ ಎಂದು ಬ್ರಿಟನ್ ವಿದೇಶಾಂಗ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ. `ಹಸ್ತಾಂತರ ಕಾಯ್ದೆಗೆ ಅನುಗುಣವಾಗಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ನಾವು ಬದ್ಧವಾಗಿದ್ದೇವೆ. ಅದರಂತೆಯೇ ಮುಂದುವರಿಯಲಿದ್ದೇವೆ~ ಎಂದು ಹೇಳಿದೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry