ನವದೆಹಲಿ/ವಿಶಾಖಪಟ್ಟಣಂ (ಐಎಎನ್ಎಸ್): ಕಳೆದ ಜನವರಿ ತಿಂಗಳಲ್ಲಿ ಎರಡು ಸೇನಾ ತುಕಡಿಗಳು ರಕ್ಷಣಾ ಇಲಾಖೆಯ ಗಮನಕ್ಕೆ ತಾರದೆ ಅನುಮಾನಾಸ್ಪದವಾಗಿ ರಾಜಧಾನಿ ನವದೆಹಲಿಯತ್ತ ಶಸ್ತ್ರಸಜ್ಜಿತವಾಗಿ ಹೊರಟಿದ್ದವು ಎಂಬ ದಿನಪತ್ರಿಕೆಯೊಂದರ ವರದಿಯನ್ನು ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ಬುಧವಾರ ಬಲವಾಗಿ ತಳ್ಳಿಹಾಕಿದ್ದಾರೆ.

ದಿನಪತ್ರಿಕೆಯಲ್ಲಿ ಬಂದಿರುವ ವರದಿ ಭೀತಿ ತರಿಸುವಂತದ್ದೇ ಆದರೂ ಅದರಲ್ಲಿ ಯಾವುದೇ ಹುರಳಿಲ್ಲ. ಸೇನಾ ಮುಖ್ಯಸ್ಥರ ಕಚೇರಿಯು ಅತ್ಯುನ್ನತವಾದ ಕಚೇರಿ. ಎಲ್ಲರಿಗೂ ಅವರದೇ ಆದ ಜವಬ್ದಾರಿಗಳಿವೆ. ಇಲ್ಲಿ ಯಾರೂ ಕೀಳಲ್ಲ ಮೇಲಲ್ಲ ಎಂದು ಪ್ರಧಾನಿ ಅವರು ಸುದ್ದಿಗಾರರಿಗೆ ತಿಳಿಸಿದರು.

ವರದಿಗೆ ಸಂಬಂಧಿಸಿದಂತೆ ವಿಶಾಖಪಟ್ಟಣಂನಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಇಲಾಖೆಯ ವಕ್ತಾರರು ವರದಿ ಸಂಪೂರ್ಣ ಆಧಾರರಹಿತವಾದದ್ದು ಹಾಗೂ ಸಂಪೂರ್ಣ ತಪ್ಪಿನಿಂದ ಕೂಡಿದೆ ಎಂದಿದ್ದಾರೆ. ಕಾಲ ಕಾಲಕ್ಕೆ ಸೇನೆ ತನ್ನದೇ ಅಭ್ಯಾಸ ಕೈಗೊಳ್ಳಲಿದೆ ಇದರಲ್ಲಿ ಬೇರೆ ಯಾವುದೇ ವಿಶೇಷ ಇಲ್ಲ ಎಂದು ತಿಳಿಸಿದ್ದಾರೆ.

ದೇಶದ ಪ್ರಮುಖ ದಿನಪತ್ರಿಕೆಯೊಂದು ಬುಧವಾರದ ತನ್ನ ಮುಖಪುಟದಲ್ಲಿ ಜನವರಿ 16ರ ರಾತ್ರಿ ಸೇನೆಯ ಎರಡು ಶಸ್ತ್ರಸಜ್ಜಿತ ತುಕಡಿಗಳು ಆಗ್ರಾದಿಂದ ನವದೆಹಲಿಯತ್ತ ತೆರಳಿದ್ದವು. ಇದರ ಬಗೆಗೆ ರಕ್ಷಣಾ ಇಲಾಖೆಗೆ ಯಾವುದೇ ಮಾಹಿತಿ ಇರಲಿಲ್ಲ. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ವರದಿ ಮಾಡಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.