ಗುರುವಾರ , ಜೂನ್ 24, 2021
28 °C

ರಾಜಧಾನಿ ದೆಹಲಿಯಲ್ಲಿ ಹೋಳಿ ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಜಧಾನಿ ನಗರ ದೆಹಲಿಯಲ್ಲಿ ಭಾನುವಾರ ಬಣ್ಣಗಳ ಹಬ್ಬ ಹೋಳಿ­ಯದ್ದೇ ಸಡಗರ. ಎಲ್ಲಾ ವಯೋಮಾನದ ಜನರು ರಸ್ತೆಗಳಲ್ಲಿ ಒಂದೆಡೆ ಸೇರಿ ಬಣ್ಣಗಳನ್ನು ಎರಚಿ ಸಂಭ್ರಮಿಸಿದರು.ವೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಗುಲಾಬಿ ಎಲೆಗಳು ಹಾಗೂ ಬಣ್ಣಗಳನ್ನು ಎರಚಿ,  ಸಿಹಿ ಹಂಚಿ, ನೃತ್ಯ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.ಬಾಲಿವುಡ್‌ ಅಂಗಳದಲ್ಲಿ ಹೋಳಿ ಸಂಭ್ರಮ: ಬಾಲಿವುಡ್‌ ಅಂಗಳದಲ್ಲೂ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು ಹರಿದಾಡಿವೆ. ಬಾಲಿ­ವುಡ್‌ ನಟ, ನಟಿಯರು ತಮ್ಮ ಪ್ರೀತಿಯ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಟ್ವೀಟ್‌ ಮಾಡಿ ಹೋಳಿ ಹಬ್ಬದ ಶುಭಾಶಯಗಳನ್ನು  ತಿಳಿಸಿದ್ದಾರೆ.

‘ಹೋಳಿ ಹಬ್ಬ ನಿಮಗೆಲ್ಲಾ ಸಂತಸ ತರಲಿ’ ಎಂದು ಬಾಲಿವುಡ್‌ ನಟ ಅಮಿ­ತಾಭ್ ಬಚ್ಚನ್‌ ಟ್ವೀಟ್‌ ಮಾಡಿದ್ದಾರೆ.‘ಕಳೆದ ಕೆಲವು ವರ್ಷಗಳ ಹಿಂದಿನ ಕೆಟ್ಟ ಕ್ಷಣಗಳಿಂದಾಗಿ ನಾನು ಸಂಭ್ರಮಾ­ಚ­ರ­ಣೆಯಲ್ಲಿ ಭಾಗವಹಿಸು­ವುದಿಲ್ಲ. ಆದರೆ ಮಗಳು ಶ್ವೇತಾ ಹುಟ್ಟುಹಬ್ಬ ಇರುವ ಕಾರಣ ಅವಳ ಜೊತೆ ಸಮಯ ಕಳೆಯುತ್ತೇನೆ‘ ಎಂದು ಅಮಿತಾಭ್ ಹೇಳಿದ್ದಾರೆ.ನಟಿಯರಾದ ಶ್ರುತಿ ಹಾಸನ್‌,   ಮಲ್ಲಿಕಾ ಶೆರಾವತ್‌ ಅವರೂ ಶುಭಾಶಯ ಟ್ವೀಟ್‌ ಮಾಡಿದ್ದಾರೆ. ಮೂವರ ಸಾವು: ಹೋಳಿ ಆಚರಣೆ ವೇಳೆ ರಾಜಸ್ತಾನದ ಬನ್‌್ಸವಾರಾ ಜಿಲ್ಲೆಯ ಮಾಹಿ ಕಾಲುವೆಯಲ್ಲಿ  ಮುಳುಗಿ ಮೂವರು ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.