ರಾಜಸ್ತಾನದ ಓಯಸಿಸ್

ಬಿರುಬಿಸಿಲಿನ ರಾಜಸ್ತಾನ ರಾಜ್ಯದಲ್ಲಿ ಂಪಾದ ಹವೆಯನ್ನು ಹೊಂದಿರುವ ನಗರ ಅಜ್ಮೀರ್. ‘ರಾಜಸ್ತಾನದ ಓಯಸಿಸ್’ ಎನ್ನುವುದು ಅದರ ವಿಶೇಷಣ. ಹಸಿರು ಬೆಟ್ಟಗಳು, ಸರೋವರಗಳು, ಐತಿಹಾಸಿಕ ದೇವಾಲಯಗಳು, ದರ್ಗಾಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಸಾಕಷ್ಟು ಸಾಮ್ರಾಜ್ಯಗಳಿಗೆ ನೆಲೆ ನೀಡಿದ ಅಜ್ಮೀರ್ ಇಂದು ಹಿಂದು ಮತ್ತು ಮುಸ್ಲಿಮರ ಯಾತ್ರಾಸ್ಥಳ. ಅಜ್ಮೀರದಲ್ಲಿ ಸಂತ ಖ್ವಾಜ ಮೂನುದ್ದೀನ್ ಚಿಸ್ಟಿಯ ದರ್ಗಾ ಇದ್ದು, ಅಲ್ಲಿಗೆ ಮುಸ್ಲಿಮರ ದಂಡು ಭೇಟಿ ಕೊಟ್ಟರೆ, ಅಜ್ಮೀರ್‌ನಿಂದ 14 ಕಿ.ಮೀ. ಅಂತರದಲ್ಲಿ ಇರುವ ಪುಷ್ಕರಣಿಯ ಬಳಿ ಇರುವ ಬ್ರಹ್ಮ ದೇವಾಲಯಕ್ಕೆ ಹಿಂದೂ ಭಕ್ತಸಾಗರ ಹರಿಯುತ್ತದೆ.
ಕಾರ್ತಿಕ ಮಾಸದಲ್ಲಿ ಅಲ್ಲಿ ಪವಿತ್ರ ಸ್ನಾನ ಮಾಡುವುದು ವಾಡಿಕೆ. ಪುಷ್ಕರಣಿಯ ಬಳಿ ಜಗದ್ವಿಖ್ಯಾತ ಒಂಟೆಗಳ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ವ್ಯಾಪಾರಿಗಳು, ನೃತ್ಯಗಾರರು, ಸಂಗೀತಗಾರರು ರಾಜಸ್ತಾನದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತಾರೆ. ಅಜ್ಮೀರ್‌ನ ವಾಯುವ್ಯ ಭಾಗದಲ್ಲಿ ಅನ್ನಾ ಸಾಗರ್ ಹೆಸರಿನ ಕೃತಕ ಬೃಹತ್ ಸರೋವರ ಇದೆ.
ಊರಿನ ಗಡಿ ತೋರಿಸುವ ತಾರಾಗಡ ಕೋಟೆ, ಹಾಗೆಯೇ ಎರಡೂವರೆ ದಿನದಲ್ಲಿ ನಿರ್ಮಾಣವಾಗಿರುವ ಆದೈ ದಿನ್ ಕ ರೆನ್‌ಪ್ರಾ ಇಂಡೊ ಇಸ್ಲಾಮಿಕ್ ಶೈಲಿಗೆ ಸಾಕ್ಷಿಯಾಗಿ ನಿಂತಿದೆ. ಆ ಮಸೀದಿಯ ಏಳು ಕಮಾನುಗಳು, ಕಂಬಗಳು ಕಲಾತ್ಮವಾಗಿದ್ದು ಮನಸೆಳೆಯುತ್ತವೆ. ಅಜ್ಮೀರ್ ಸುತ್ತಮುತ್ತ ನಾಸಿಯನ್ ದೇವಾಲಯ, ರಂಗ್ಜಿ ದೇವಾಲಯ, ಸಾವಿತ್ರಿ ದೇವಾಲಯ, ಸರಸ್ವತಿ ದೇವಾಲಯ, ಖ್ವಾಜಾ ಸಾಹೀಬ್ ದರ್ಗಾ, ವರಹಾ ದೇವಾಲಯ, ಮಹದೇವ್ ದೇವಾಲಯ, ಮನ್ ಮಹಲ್, ವೈಕುಂಠನಾಥ ದೇವಾಲಯಗಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.