ಮಂಗಳವಾರ, ಜೂನ್ 22, 2021
26 °C

ರಾಜ್ಯದಲ್ಲೂ ತೃತೀಯ ಶಕ್ತಿ ಒಗ್ಗೂಡಲಿ: ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭಾ ಚುನಾವಣೆ­ಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎದು­ರಿಸಲು ರಾಜ್ಯದಲ್ಲೂ ಸಮಾನಮನಸ್ಕ ರಾಜ­ಕೀಯ ಶಕ್ತಿಗಳು ಒಂದಾಗಬೇಕು ಎಂದು ಜೆಡಿಯು ರಾಜ್ಯ ಪ್ರಧಾನ ಕಾರ್ಯ­ದರ್ಶಿ ಜಿ.ಕೆ.ಸಿ. ರೆಡ್ಡಿ ಅಭಿಪ್ರಾಯಪಟ್ಟರು.ಕಾಂಗ್ರೆಸ್‌ ಮತ್ತು ಬಿಜೆಪಿಗೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ. ರಾಜ್ಯದ ಜನತೆ ಈ ಎರಡು ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನು ಬಯಸಿದ್ದಾರೆ. ಕರ್ನಾಟಕದಲ್ಲಿ ಪರ್ಯಾಯ ರಂಗಕ್ಕೆ ಸೇರುವ ಪಕ್ಷ­ಗಳಲ್ಲಿ ಜೆಡಿಎಸ್‌ ದೊಡ್ಡ ಪಕ್ಷವಾಗಿದೆ.ಹೀಗಾಗಿ  ತೃತೀಯ ಶಕ್ತಿ ಒಂದುಗೂಡಿಸುವ ಪ್ರಕ್ರಿಯೆಯನ್ನು ಜೆಡಿಎಸ್‌ ರಾಷ್ಟ್ರ ಘಟಕದ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಕೈಗೊಳ್ಳಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈಗಾಗಲೇ ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿಯುತ ಪರ್ಯಾಯ ರಂಗ ಸ್ಥಾಪನೆ­ಯಾಗಿದೆ. ಇದೇ ಮಾದರಿ­ಯಲ್ಲಿ ರಾಜ್ಯದಲ್ಲೂ ಸಮಾನ ಮನಸ್ಕ ಪಕ್ಷಗಳು ಒಂದುಗೂಡಿದರೆ ಚುನಾ­ವಣೆ­ಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಅಭಿಪ್ರಾಯ­ಪಟ್ಟರು.ಲಿಂಗನಮಕ್ಕಿಯಿಂದ ನೀರು ಹರಿಸಿ: ಲಿಂಗನ­ಮಕ್ಕಿ ಜಲಾಶಯದಿಂದ ಸುಮಾರು 60 ಟಿಎಂಸಿ ನೀರನ್ನು ಬೆಂಗ­ಳೂ­ರಿಗೆ ಹಾಗೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಪೂರೈಸ­ಬಹುದು ಎಂದು ಬಿ.ಎನ್‌. ತ್ಯಾಗರಾಜ್‌ ಅಧ್ಯಕ್ಷತೆಯ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.ಆದ್ದರಿಂದ, ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ತಕ್ಷಣ ಈ ಯೋಜನೆ ಅನು­ಷ್ಠಾನ­ಗೊಳಿಸಬೇಕು ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.