ಸೋಮವಾರ, ಏಪ್ರಿಲ್ 12, 2021
31 °C

ರಾಜ್ಯದ ನಾಲ್ಕು ಮಂದಿಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಮಲೇಷ್ಯಾದ ಇಫೋದಲ್ಲಿ ನಡೆಯಲಿರುವ ಸುಲ್ತಾನ್ ಅಜ್ಲನ್ ಷಾ ಹಾಕಿ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.ಕರ್ನಾಟಕದ ಅರ್ಜುನ್ ಹಾಲಪ್ಪ, ಭರತ್ ಕುಮಾರ್ ಚೆತ್ರಿ, ಧನಂಜಯ್ ಮಹಾದಿಕ್ ಹಾಗೂ ಎಸ್.ವಿ.ಸುನಿಲ್ ಸ್ಥಾನ ಪಡೆದಿದ್ದಾರೆ. ‘ಹಾಕಿ ಇಂಡಿಯಾ’ವು ಈ ಟೂರ್ನಿಗೆ ಮಂಗಳವಾರ ಒಟ್ಟು 18 ಮಂದಿ ಆಟಗಾರರನ್ನು ಆಯ್ಕೆ ಮಾಡಿದೆ. ಮಾಜಿ ನಾಯಕ ರಾಜ್‌ಪಾಲ್ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ. ಮೇ 5ರಿಂದ 15ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ತಂಡವನ್ನು ಅರ್ಜುನ್ ಹಾಲಪ್ಪ ಮುನ್ನಡೆಸಲಿದ್ದಾರೆ.ಭಾರತ ಕಳೆದ ಬಾರಿ ಮಳೆಯ ಕಾರಣ ದಕ್ಷಿಣ ಕೊರಿಯಾ ಜೊತೆ ಜಂಟಿ ಚಾಂಪಿಯನ್ ಆಗಿತ್ತು. ಭಾರತವಲ್ಲದೇ, ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಕೊರಿಯಾ ಹಾಗೂ ಆತಿಥೇಯ ಮಲೇಷ್ಯಾ ತಂಡಗಳು ಪಾಲ್ಗೊಳ್ಳಲಿವೆ.ತಂಡ ಇಂತಿದೆ: ಗೋಲ್‌ಕೀಪರ್ಸ್‌: ಭರತ್ ಕುಮಾರ್ ಚೆತ್ರಿ, ಆ್ಯಡ್ರಿಯಾನ್ ಡಿಸೋಜಾ. ಡಿಫೆಂಡರ್ಸ್: ಧನಂಜಯ್ ಮಹಾದಿಕ್, ರೂಪಿಂದರ್ ಪಾಲ್ ಸಿಂಗ್, ದಿವಾಕರ್ ರಾಮ್.ಮಿಡ್‌ಫೀಲ್ಡರ್ಸ್: ಗುರ್ಬಜ್ ಸಿಂಗ್, ವಿಕಾಸ್ ಪಿಳ್ಳೈ, ವಿಕ್ರಮ್ ಪಿಳ್ಳೈ, ಅರ್ಜುನ್ ಹಾಲಪ್ಪ (ನಾಯಕ), ರವಿ ಪಾಲ್, ಡ್ಯಾನಿಸ್ ಮುಜ್ತಾಬಾ, ವಿಕಾಸ್ ಶರ್ಮ.

ಫಾರ್ವರ್ಡ್ಸ್: ಶಿವೇಂದ್ರ ಸಿಂಗ್, ಎಸ್.ವಿ.ಸುನಿಲ್, ಮನ್‌ದೀಪ್ ಅಂಟಿಲ್, ಸರ್ವಂಜೀತ್ ಸಿಂಗ್, ಗುರ್ವಿಂದರ್ ಸಿಂಗ್ ಚಂದಿ, ರೋಶನ್ ಮಿನ್ಜ್.

ಕಾಯ್ದಿರಿಸಿದ ಆಟಗಾರರು: ಪಿ.ಆರ್.ಶ್ರೀಜೇಶ್, ವಿಲಿಯಮ್ ಕ್ಸಾಲ್ಕೊ, ಗುರ್ಜಿಂದರ್ ಸಿಂಗ್, ಬೀರೇಂದ್ರ ಲಾಕ್ರಾ, ಪ್ರೀತಿಂದರ್ ಸಿಂಗ್ ಹಾಗೂ ಬಿಕಾಶ್ ಟೊಪ್ಪೊ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.