ಭಾನುವಾರ, ಆಗಸ್ಟ್ 9, 2020
21 °C

ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್: ಸುದೀಪ್ ಚಾಂಪಿಯನ್;ಅಪೇಕ್ಷಾಗೆ ಪ್ರಶಸ್ತಿ ಡಬಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್: ಸುದೀಪ್ ಚಾಂಪಿಯನ್;ಅಪೇಕ್ಷಾಗೆ ಪ್ರಶಸ್ತಿ ಡಬಲ್

ಬೆಂಗಳೂರು: ಅಪೇಕ್ಷಾ ನಾಯಕ್ ಅವರು ಇಲ್ಲಿ ನಡೆದ 18ನೇ ವರ್ಷದ ರಾಮಯ್ಯ ರಾಜನ್ ಸ್ಮಾರಕ ತ್ರಿ ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 17 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡರು.ಮಂಗಳವಾರ ನಡೆದ ಬಾಲಕಿಯರ ವಿಭಾಗದ ಅಂತಿಮ ಘಟ್ಟದ ಪಂದ್ಯದಲ್ಲಿ ಅಪೇಕ್ಷಾ 21-17, 21-13ರಲ್ಲಿ ಬೆಳಗಾವಿಯ ಮೇಘನಾ ಕುಲಕರ್ಣಿ ವಿರುದ್ಧವೂ, ಬಾಲಕರ ವಿಭಾಗದ ಫೈನಲ್‌ನಲ್ಲಿ ಸುದೀಪ್ 21-18, 21-17ರಲ್ಲಿ ಸೈಯದ್ ಸಾದ್ ಅಲಿ ಮೇಲೂ ಜಯಿಸಿ ಚಾಂಪಿಯನ್ ಆದರು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಸೈಯದ್ 17-21, 21-10, 21-13ರಲ್ಲಿ ಕಿರಣ್ ಕುಮಾರ್ ಮೇಲೂ, ಸುದೀಪ್ 21-13, 21-14ರಲ್ಲಿ ಆಕಾಶ್‌ರಾಜ್ ಮೂರ್ತಿ ವಿರುದ್ಧವೂ ಜಯ ಪಡೆದರು. ಬಾಲಕಿಯರ ವಿಭಾಗದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅಪೇಕ್ಷಾ 21-17, 21-13ರಲ್ಲಿ ವಿ. ಸರಾಯು ಮೇಲೂ, ಮೇಘನಾ 21-18, 19-21, 21-17ರಲ್ಲಿ ಅರ್ಚನಾ ಪೈ ಎದುರು ಜಯ ಪಡೆದು ಫೈನಲ್ ಪ್ರವೇಶಿಸಿದ್ದರು.ಇದೇ ವಯೋಮಾನದ ಬಾಲಕರ ಡಬಲ್ಸ್‌ನಲ್ಲಿ ಕೆ. ಲೋಕ ಸಾಯಿನಾಥ್-ಎಂ. ಮಧುಸೂದನ್ ಅವರು ಚೇತನ್ ರಾಜ್-ಎಂ. ರಘು ಅವರಿಂದ `ವಾಕ್ ಓವರ್~ ಪಡೆದರು.ಅಪೇಕ್ಷಾಗೆ ಪ್ರಶಸ್ತಿ ಡಬಲ್: ಸಿಂಗ  ಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಅಪೇಕ್ಷಾ ಡಬಲ್ಸ್‌ನಲ್ಲೂ ಪಾರಮ್ಯ ಮರೆದರು. ಅರ್ಚನಾ ಪೈ ಜೊತೆಗೂಡಿ ಆಡಿದ ಈ ಆಟಗಾರ್ತಿ ಫೈನಲ್‌ನಲ್ಲಿ 21-9, 21-12ರಲ್ಲಿ ವಿ. ಸರಾಯು-ಶೀತಲ್ ಸುದರ್ಶನ್ ಎದುರು ಗೆಲುವು ಸಾಧಿಸಿದರು.ಕಿರಣ್-ಸಿಂಧು ಚಾಂಪಿಯನ್: 19 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನ ಸ್ಪರ್ಧೆಯಲ್ಲಿ ಕಿರಣ್ ಮೌಳಿ 21-19, 22-20ರಲ್ಲಿ ನಿಶಾಂತ್ ಅವರನ್ನು ಸೋಲಿಸಿದರೆ, ಬಾಲಕಿಯರ ವಿಭಾಗದಲ್ಲಿ ಸಿಂಧು ಭಾರದ್ವಾಜ್ 18-21 21-13 21-13ರಲ್ಲಿ ಪಾರ್ವತಿ ಕೃಷ್ಣನ್ ಎದುರು ಜಯಿಸಿ ಚಾಂಪಿಯನ್ ಆದರು.ಬಾಲಕರ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕಿರಣ್ 21-15, 13-21, 21-18ರಲ್ಲಿ ಯುವರಾಜ್ ಶಿಂಧೆ ಮೇಲೂ, ನಿಶಾಂತ್ 16-21, 21-14, 22-20ರಲ್ಲಿ ಆಕಾಶ್‌ರಾಜ್ ಮೂರ್ತಿ ವಿರುದ್ಧವೂ ಜಯಿಸಿ ಅಂತಿಮಘಟ್ಟ ಪ್ರವೇಶಿಸಿದ್ದರು.ಇದೇ ವಯೋಮಾನದ ಬಾಲಕರ ಡಬಲ್ಸ್‌ನ ಫೈನಲ್‌ನಲ್ಲಿ ಕಿರಣ್-ವಸಂತ್ ಕುಮಾರ್ ಎಚ್.ಎಸ್. ಜೋಡಿ 21-15, 21-18ರಲ್ಲಿ ಡಿ. ಮಹೇಶ್ ಕುಮಾರ್-ಕೆ. ರಾಜು ಎದುರು ಜಯ ಪಡೆದರೆ, ಬಾಲಕಿಯರ ವಿಭಾಗದಲ್ಲಿ ದೇವಿಕಾ ರವೀಂದ್ರ ಹಾಗೂ ಸಿಂಧು ಭಾರದ್ವಾಜ್ ಜೋಡಿ 21-14, 21-15ರಲ್ಲಿ ಮೇಘನಾ-ಪಾರ್ವತಿ ಎದುರು ಜಯ ಸಾಧಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.