ಕಡು ನೀಲಿ ಬಣ್ಣದ ಜೀನ್ಸ್, ತಿಳಿ ನೇರಳೆ ಬಣ್ಣದ ಕುರ್ತಾ, ಕಂದು ಬಣ್ಣದ ಕನ್ನಡಕ ಧರಿಸಿದ್ದ ಬಾಲಿವುಡ್ ನಟಿ ಕರಿನಾ ಕಪೂರ್ಗೆ ಅಭಿಮಾನಿಗಳು ಹಾಗೂ ಫೋಟೊಗ್ರಾಫರ್ಗಳಿಂದ ರಕ್ಷಣೆ ಕೊಡುವ ಸಲುವಾಗಿ ಕಪ್ಪು ಬಣ್ಣದ ಸೂಟ್ ಧರಿಸಿದ್ದ ನಾಲ್ವರು ದಾಂಡಿಗರು ಹೆಣಗಾಡುತ್ತಿದ್ದರು.

ತುಟಿಯಂಚಿನಲ್ಲಿ ಲಾಸ್ಯವಾಡುತ್ತಿದ್ದ ಸ್ನಿಗ್ಧ ನಗು ಆಕೆಯ ಚೆಲುವನ್ನು ಮತ್ತಷ್ಟು ಹೆಚ್ಚಿಸಿತ್ತು. ಆ ನಗುಮೊದಲ್ಲೇ ಫೋಟೋಗೆ ಪೋಸ್ ಕೊಡುತ್ತಾ, ಹಸ್ತಾಕ್ಷರ ನೀಡುತ್ತಾ ಅಭಿಮಾನಿಗಳ ಅತ್ಯುತ್ಸಾಹಕ್ಕೆ ಕೊಂಚ ಕೂಡ ಬೇಸರಿಸಿಕೊಳ್ಳದೇ ಮಾತಿಗೆ ಕುಳಿತರು ಶ್ವೇತ ಸುಂದರಿ.

ಕಾರ್ಯಕ್ರಮವೊಂದನ್ನು ನೀಡುವ ಸಲುವಾಗಿ ಈಚೆಗೆ ನಗರದಲ್ಲಿದ್ದರು ಕರಿನಾ. ತಾರಾ ಹೋಟೆಲೊಂದರಲ್ಲಿ ಮಾತಿಗೆ ಸಿಕ್ಕಿದರು. ತಮ್ಮ ಬಣ್ಣದ ಬದುಕು, ಮುಂದಿನ ಸಿನಿಮಾಗಳು, ಬೆಂಗಳೂರು ಹಾಗೂ ಕನ್ನಡ ಸಿನಿಮಾ ಕುರಿತು ಮಾತನಾಡಿದರು.

`ನನಗೆ ಬೆಂಗಳೂರಿನ ಹಿತಕರ ಹವಾಗುಣ ಸದಾ ಮುದನೀಡುತ್ತದೆ. ಜೊತೆಗೆ ಬೆಂಗಳೂರಿನಲ್ಲಿ ನನಗೆ ಹೆಚ್ಚು ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳು ನನ್ನ ಎಲ್ಲ ಚಿತ್ರವನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಾರೆ. ಅವರಿಗೆಲ್ಲಾ ಥ್ಯಾಂಕ್ಸ್~ ಎಂದರು.

`ಬಾಡಿಗಾರ್ಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ನನ್ನ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರಕ್ಕೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. 3 ಈಡಿಯಟ್ಸ್ ಹಾಗೂ ಗೋಲ್ಮಾಲ್ 3 ನಂತರದ ನನ್ನ ಹಿಟ್ ಚಿತ್ರ ಬಾಡಿಗಾರ್ಡ್. ಮುಂದಿನ ಬಹುನಿರೀಕ್ಷಿತ ಚಿತ್ರ `ರಾ ಒನ್~ ಬಗ್ಗೆ ಸಹ ಕೌತುಕದಿಂದ ಇದ್ದೇನೆ. ಇದು ಸಂಪೂರ್ಣ ಮಸಾಲಾ ಚಿತ್ರ. ಶಾರುಖ್ ಖಾನ್ ಜೊತೆಗಿನ ನಟನೆಯ ಅನುಭವವೇ ಭಿನ್ನವಾದದು.
ಬಾಡಿಗಾರ್ಡ್ನಲ್ಲಿನ ನನ್ನ ಪಾತ್ರಕ್ಕೂ `ರಾ ಒನ್~ ನಲ್ಲಿ ಅಭಿನಯಿಸಿರುವ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ಈ ಎರಡು ಚಿತ್ರಗಳಲ್ಲಿ ನನಗೆ ಭಿನ್ನ ಪಾತ್ರಗಳು ದೊರೆತಿವೆ~ ಎಂದು ನೆನಪಿಸಿಕೊಂಡರು.

ಖಾನ್ತ್ರಯರೊಂದಿಗೆ ಅಭಿನಯ ದೊರೆತಿರುವ ನನಗೆ ಅತ್ಯಂತ ಖುಷಿ ತಂದಿದೆ. ಉತ್ತಮ ಚಿತ್ರಕಥೆ ಹಾಗೂ ಸೃಜನಶೀಲ ನಿರ್ದೇಶಕರು ಸಿಕ್ಕರೆ ಖಂಡಿತವಾಗಿ ನಾನು ಕನ್ನಡ ಚಿತ್ರದಲ್ಲಿ ನಟಿಸುತ್ತೇನೆ. ಅಂದಹಾಗೆ, ನಾನು 2012ರ ವರೆಗೆ ಫುಲ್ ಬ್ಯುಸಿಯಾಗಿದ್ದೇನೆ~ ಎಂದು ನಕ್ಕು ಕೈ ಬೀಸಿ ಹೊರ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.