ಶುಕ್ರವಾರ, ಮೇ 14, 2021
31 °C

ರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜರಗನಹಳ್ಳಿಯ ಗ್ರಾಮಾಭಿವೃದ್ಧಿ ಸಂಘವು ಏಪ್ರಿಲ್ 15ರಂದು ರಾಮಚಂದ್ರಸ್ವಾಮಿಯ ಬ್ರಹ್ಮರಥೋತ್ಸವವವನ್ನು ಹಮ್ಮಿಕೊಂಡಿದೆ.ಈ ಮಹೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 13ರಂದು ಬೆಳಿಗ್ಗೆ ಅಂಕುರಾರ್ಪಣ, ಧ್ವಜಾರೋಹಣ, ಕಲಶ ಸ್ಥಾಪನೆ, ಭೇರಿತಾಡನೋತ್ಸವ. ರಾತ್ರಿ ಶೇಷವಾಹನೋತ್ಸವ ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ.14ರಂದು ಬೆಳಿಗ್ಗೆ ಹನುಮಂತೋತ್ಸವ, ವೈರಮುಡಿ ಉತ್ಸವ. ಸಂಜೆ ಪ್ರಕಾರೋತ್ಸವ, ಕಾಶಿಯಾತ್ರೆ, ಸೀತಾಕಲ್ಯಾಣೋತ್ಸವ. ರಾತ್ರಿ ಗಜೇಂದ್ರಮೋಕ್ಷ ಕಾರ್ಯಕ್ರಮಗಳು ನಡೆಯಲಿವೆ. 15ರಂದು ಬೆಳಿಗ್ಗೆ ಗಂಗಾಧರೇಶ್ವರ ಸ್ವಾಮಿಗೆ ಅಭಿಷೇಕ, ನವಗ್ರಹ ಅಭಿಷೇಕ, ಮಧ್ಯಾಹ್ನ 1.45ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ ಧೂಳೋತ್ಸವ, ಚಂದ್ರ ಮಂಡಲೋತ್ಸವ, ಉಯ್ಯಾಲೋತ್ಸವ ಮೊದಲಾದ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ.ರಾತ್ರಿ 8ಕ್ಕೆ ಮಂಟಪೋತ್ಸವ, 10ಕ್ಕೆ ಶ್ರೀ ಗಣಪತಿ ಹೂವಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ಅಂದು ಬೆಳಿಗ್ಗೆ 8ಕ್ಕೆ ರಾಜ್ಯ ಮಟ್ಟದ ರಸ್ತೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.16ರಂದು ಸಂಜೆ 5ಕ್ಕೆ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಆಶ್ರಯದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದೆ. 17ರ ರಾತ್ರಿ 9.30ಕ್ಕೆ ಶ್ರೀ ರಾಮಾಂಜನೇಯ ಕೃಪಾಪೋಷಿತ ನಾಟಕ ಮಂಡಳಿ ತಂಡದಿಂದ ರಾಜವಿಕ್ರಮ ಅಥವಾ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.