ರಾಮನಗರ: ಮಾವು ಇಳುವರಿ ಶೇ 50 ಕುಸಿತ

ರಾಮನಗರ: ಜಿಲ್ಲೆಯ ಪ್ರಮುಖ ಬೆಳೆಯಾದ ಮಾವಿಗೆ ಈ ಬಾರಿ ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯ ತೀವ್ರವಾಗಿ ಕಾಡಿದ್ದು, ಇಳುವರಿ ಶೇ 50ರಷ್ಟು ಕುಸಿದಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ವಿ.ವೆಂಕಟೇಶ್ ಮತ್ತು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಎಚ್.ಎನ್.ಹೇಮಾ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 23,995 ಹೆಕ್ಟೇರ್ಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ಬಾದಾಮಿ, ರಸಪುರಿ, ಸೇಂದೂರ, ತೋತಾಪುರಿ, ಮಲ್ಲಿಕಾ ತಳಿ ಹೆಚ್ಚಿವೆ. ಈ ಬಾರಿ ಆರಂಭದಲ್ಲಿ ಮಾವು ಹೂವಾಗಿದ್ದನ್ನು ಗಮನಿಸಿದರೆ ಅಂದಾಜು ಮೂರು ಲಕ್ಷ ಟನ್ ಮಾವು ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ ಕೇವಲ 1.50 ಲಕ್ಷ ಟನ್ ಬೆಳೆ ಬಂದಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಬಹುತೇಕ ಭಾಗದಲ್ಲಿ ಮಾವು ಬೆಳೆಯಲ್ಲಿ ಕುಸಿತವಾಗಿದೆ. ಹಾಗಾಗಿ ಬೆಲೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದ್ದು, ರೈತರಿಗೆ ಉತ್ತಮ ಬೆಲೆ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ ಎಂದರು.ಮಳೆ ಕೊರತೆ, ಬತ್ತಿ ಹೋಗಿರುವ ಅಂತರ್ಜಲ, ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಶೇ 10ರಷ್ಟು ಮಾವಿನ ಗಿಡಗಳು ನಾಶವಾಗಿವೆ. ರೈತರು ಬೆಳೆ ಹಾಗೂ ಗಿಡಗಳಿಗೆ ವಿಮೆ ಮಾಡಿಸಿದ್ದರೆ ಅವರ ನಷ್ಟದ ಪ್ರಮಾಣ ತಗ್ಗುತ್ತದೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.