ದೇವನಹಳ್ಳಿ: ರಾಮನವಮಿ ಅಂಗವಾಗಿ ಮಂಗಳವಾರ ಪಟ್ಟಣದ ವಿವಿಧ ದೇವಾಲಯಗಳಲ್ಲಿ, ರಸ್ತೆಗಳಲ್ಲಿ ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಣೆ ನಡೆಯಿತು. ತಾಲ್ಲೂಕು ಕಚೇರಿ ಆವರಣದ ಆಂಜನೇಯ ಸ್ವಾಮಿ ದೇವಾಲಯ, ಶನೇಶ್ವರ ಸ್ವಾಮಿ ದೇವಾಲಯ, ತರಗು ಪೇಟೆ ಆಂಜನೇಯ ದೇವಾಲಯ, ಸರ್ಕಲ್ ಆಂಜನೇಯ, ರಂಗನಾಥಸ್ವಾಮಿ ದೇವಾಲಯ, ರಾಮದೂತ ಅಚಲ ಮಂದಿರ, ಮುನೇಶ್ವರ ದೇವಾಲಯ, ಕಾಳಿಕಾಂಬ ದೇವಾಲಯಗಳಲ್ಲಿ ದೇವರ ಮೂರ್ತಿಗೆ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ ಮತ್ತು ಪೂಜೆ ನಡೆಯಿತು. ನಂತರ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು. ತಾಲ್ಲೂಕಿನ ಗ್ರಾಮೀಣ ಭಾಗದ ದೇವಾಲಯಗಳಲ್ಲೂ ಪಾನಕ, ಮಜ್ಜಿಗೆ ಸೇವೆ ನಡೆಯಿತು.

ತಾಲ್ಲೂಕಿನ ಸಾವಕನಹಳ್ಳಿಯಲ್ಲಿ ವೇಣುಗೋಪಾಸ್ವಾಮಿ ಮತ್ತು ಮುತ್ತುರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆ ಸಾಗಿದರು. ಉತ್ಸವದಲ್ಲಿ ಆನೆ ಮೆರವಣಿಗೆ ಗಮನ ಸೆಳೆಯಿತು. ನಂತರ ದೇವರಿಗೆ ವಿಶೇಷ ಪೂಜೆ ನಡೆಯಿತು. ಮಾಗಡಿ ಕೆಂಪೇಗೌಡ ಜನ್ಮ ದಿನಾಚರಣೆ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ತಾ.ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಪಿ.ಮುನಿರಾಜು, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಎ.ಚಿನ್ನಪ್ಪ, ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಮುಖಂಡರಾದ ಗೋಪಾಲಸ್ವಾಮಿ, ಚಿಕ್ಕಮುನಿಯಪ್ಪ ಇತರರು ಹಾಜರಿದ್ದರು.

ವಿಶೇಷ ಕಾರ್ಯಕ್ರಮ
ವಿಜಯಪುರ : ಶ್ರೀರಾಮನವಮಿ ಪ್ರಯುಕ್ತ ಪಟ್ಟಣದೆಲ್ಲೆಡೆ ವಿಶೇಷ ಕಾರ್ಯಕ್ರಮಗಳು ನಡೆದವು. ಇಲ್ಲಿನ ಅಶೋಕನಗರ ಮಾರುತಿ ಸರ್ಕಲ್ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾತ್ರಿಯಿಡೀ ವಿವಿಧ ಭಜನೆ ಮಂಡಳಿಯವರಿಂದ ಶ್ರೀ ರಾಮನಾಮಕೋಟಿ ಭಜನೆ ನಡೆಯಿತು. ಗಣಾಚಾರಿ ಪ್ರಕಾಶ್, ಪುರಸಭಾ ಸದಸ್ಯ ಎಲ್.ಚಂದ್ರಶೇಖರ್, ಕೆ.ಸದಾಶಿವಯ್ಯ, ತಹಶೀಲ್ದಾರ್ ಎಲ್.ಸಿ.ನಾಗರಾಜು, ತಾಲ್ಲೂಕುಪಂಚಾಯ್ತಿ ಅಧ್ಯಕ್ಷ ಬೀಡಿಗಾನಹಳ್ಳಿ ಶಿವಣ್ಣ, ಪುರಸಭಾ ಸದಸ್ಯರು ಭಾಗವಹಿಸಿದ್ದರು.

ಲಿಖಿತ ಶ್ರೀರಾಮನಾಮ ಪುಸ್ತಕ ಮಹಾಹೋಮ, ಶಾಂತಿಹೋಮ, ಪೂರ್ಣಾಹುತಿ, ಅಷ್ಟೋತ್ತರ ಶಾತ್ತುಮರೈ, ಭಜನಾ ಸಮಾಪ್ತಿ, ಮಹಾಮಂಗಳಾರತಿ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು. ಸಂಜೆ ಎಂ.ವಿ.ನಾಯ್ಡು ತಂಡದವರಿಂದ ಹಾಗೂ ಶ್ರೀದೇವಿ ರಾಘವೇಂದ್ರರಾವ್ ತಂಡದವರಿಂದ ಭಕ್ತಿಲಹರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ರಾಮಮಂದಿರದಲ್ಲಿ ನಡೆದ ವಿಶೇಷ ಅಲಂಕಾರ, ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನಡೆಯಿತು.

ಶ್ರೀ ಮುನೇಶ್ವರ ಸ್ವಾಮಿ ದೇವಾಲಯ, ಆನೆಕಲ್ಲು ಛತ್ರದ ಶ್ರೀ ಭಕ್ತಾಂಜನೇಯಸ್ವಾಮಿ ದೇವಾಲಯ, ಶ್ರೀ ನಗರೇಶ್ವರಸ್ವಾಮಿ ದೇವಾಲಯದ ಬಳಿಯ ರಾಮ ದೇವಾಲಯ, ಬಸ್ನಿಲ್ದಾಣದ ಎದುರು ಇರುವ ಬಿ.ಎಂ.ಎಸ್ ಸಮುದಾಯ ಭವನದ ಮುಂಭಾಗದ ಶ್ರೀ ಗಣೇಶ ದೇವಾಲಯ, ಕಲಾ ಕೌಸ್ತುಭ ವೃತ್ತ, ಕೋಲಾರ ರಸ್ತೆಯ ಬಲಮುರಿಗಣೇಶನ ದೇವಾಲಯ, ಹಾರ್ಡಿಪುರದ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಸಾರ್ವತ್ರಿಕ ಅನ್ನಸಂತರ್ಪಣೆ, ಪಂಡರಾಪುರ ಭಜನೆ, ರಾಮನಾಮ ಭಜನೆ, ಪಾನಕ-ಮಜ್ಜಿಗೆ ವಿತರಣೆ ನಡೆಯಿತು.

ಪುರ, ಚಂದೇನಹಳ್ಳಿ ಗ್ರಾಮಗಳ ನಡುವಿನ ಶ್ರೀ ಶನೇಶ್ವರಸ್ವಾಮಿ, ಶ್ರೀ ಆದಿಪರಾಶಕ್ತಿ, ಗಣಪತಿ, ಸುಬ್ರಹ್ಮಣ್ಯಸ್ವಾಮಿ ಮತ್ತು ಪ್ರಸನ್ನಾಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷಪೂಜೆ, ವಿಶೇಷ ವಾದ್ಯಗೋಷ್ಠಿಯೊಂದಿಗೆ ದೇವರ ಮೆರವಣಿಗೆ ಮತ್ತು ಪೌರಾಣಿಕ ನಾಟಕ ಪ್ರದರ್ಶನ ಜರುಗಿತು.

ಸಂಭ್ರಮದ ಆಚರಣೆ
ಆನೇಕಲ್ : ಪಟ್ಟಣದಲ್ಲಿ ರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗಾಂಧಿ ವೃತ್ತದ ಕೋದಂಡರಾಮ ಸ್ವಾಮಿ ದೇವಾಲಯ, ತಿಮ್ಮರಾಯಸ್ವಾಮಿ ದೇವಾಯಲಗಳಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗ ಮಜ್ಜಿಗೆ-ಪಾನಕ, ಕೋಸಂಬರಿ ವಿತರಣೆ ಕಾರ್ಯ ನಿರಂತರವಾಗಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.