ಗುರುವಾರ , ಮೇ 19, 2022
20 °C

ರಾಮಾಯಣ ನಮಗೆ ದಾರಿದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ವಾಲ್ಮೀಕಿ ವಿರಚಿತ ರಾಮಾಯಣ ನಮಗೆಲ್ಲ ದಾರಿದೀಪ. ನಮ್ಮ ದೇಶಕ್ಕೊಂದು ಉನ್ನತ ಕೊಡುಗೆ ಎಂದು ಜ್ಞಾನದೀಪ ಶಾಲೆ ಪ್ರಾಂಶುಪಾಲ ಶ್ರೀಕಾಂತ್ ಎಂ. ಹೆಗಡೆ ಹೇಳಿದರು.ನಗರದ ಹೊರವಲಯದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ವಾಲ್ಮೀಕಿ ಮಹರ್ಷಿ ಜಯಂತಿ~ ಕಾರ್ಯಕ್ರಮದಲ್ಲಿ ವಾಲ್ಮೀಕಿಮಹರ್ಷಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.ಶಿಕ್ಷಕ ಶ್ರೀಧರ್‌ಭಟ್ ಮಾತನಾಡಿ, ವಾಲ್ಮೀಕಿ ಮಹರ್ಷಿಗಳ ಜೀವನ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು. ಶಾಲೆಯ ಉಪ ಪ್ರಾಂಶುಪಾಲ ರಿಜಿ ಜೋಸೆಫ್, ಮುಖ್ಯೋಪಾಧ್ಯಾಯಿನಿ ವಾಣಿ ಕೃಷ್ಣಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾದ  ರಾಮಕುಮಾರ್, ಅರಬಿಂದೋ ಕಾಲೇಜಿನ ಪ್ರಾಂಶುಪಾಲ ಕೆ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ `ವಾಲ್ಮೀಕಿ ಮಹರ್ಷಿ ಜನ್ಮ ವೃತ್ತಾಂತ~ದ ನೃತ್ಯರೂಪಕ ನಡೆಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.