ಬುಧವಾರ, ಜನವರಿ 22, 2020
16 °C

ರಾಮ್‌ಲೀಲಾ: ಹೈಕೋರ್ಟ್‌ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಸಂಜಯ್‌ ಲೀಲಾ ಬನ್ಸಾಲಿ ನಿರ್ಮಾಣದ ‘ಗೋಲಿಯೊಂಕಿ ರಾಸ್‌ಲೀಲಾ ರಾಮ್‌ಲೀಲಾ’ ಸಿನಿಮಾಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ ನೀಡಿದ್ದ ಯು/ಎ ಪ್ರಮಾಣ ಪತ್ರವನ್ನು ಪುನರ್‌ ಪರಿಶೀಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.ರಾಮ್‌ಲೀಲಾ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವ ಮೊದಲು ‘ಚಲನಚಿತ್ರ ದರ್ಶಕ ಕಾಯ್ದೆ’ಯ ಮಾರ್ಗಸೂಚಿಗಳನ್ನು ಅನುಸರಿಸ­ಲಾಗಿದೆಯೇ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡುವಂತೆ ನ್ಯಾಯಾಧೀಶರಾದ ಎಮ್‌ ಕಾನಡೆ, ಎಮ್‌.ಎಸ್‌ ಸೋನಕ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿಗೆ  ನಿರ್ದೇಶನ ನೀಡಿದೆ.

ಪ್ರತಿಕ್ರಿಯಿಸಿ (+)