ರಾಯಭಾರಿ ಸ್ಥಾನ ಕ್ರೀಡಾಪಟುಗಳಿಗೆ ಸಿಗಬೇಕು
ಚಂಡೀಗಡ (ಪಿಟಿಐ): ಕ್ರೀಡಾಪಟುಗಳನ್ನು ರಾಜ್ಯಪಾಲರನ್ನಾಗಿ ಹಾಗೂ ರಾಯಭಾರಿಗಳನ್ನಾಗಿ ನೇಮಕ ಮಾಡಬೇಕು ಎಂದು ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಒತ್ತಾಯಿಸಿದ್ದಾರೆ.
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ನೇಮಕ ಮಾಡಿದ್ದು ಸ್ವಾಗತಾರ್ಹ ಎಂದಿರುವ ಅವರು ಇದೊಂದು ವಿಶೇಷವಾದ ಬೆಳವಣಿಗೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
`ಈ ಮುನ್ನ ಕೇವಲ ರಾಜಕಾರಣಿಗಳು, ಕಲಾವಿದರು ಹಾಗೂ ಮಾಜಿ ಆಡಳಿತಗಾರರಿಗೆ ಆದ್ಯತೆ ನೀಡುತ್ತ ಬರಲಾಗಿತ್ತು. ಆದರೆ ಈಗ ಕ್ರೀಡಾಪಟುಗಳನ್ನೂ ಗಣನೆಗೆ ತೆಗೆದುಕೊಂಡಿದ್ದು ಮೆಚ್ಚುವ ಅಂಶ~ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.