ಸಾಗರ: ಮಕ್ಕಳಲ್ಲಿ ಪಠ್ಯದ ಜತೆಗೆ ಶಿಸ್ತು, ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಲ್ಲಿ ಭಾರತ ಸೇವಾದಳ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದು ಕೋಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುವರ್ಣ ಟೀಕಪ್ಪ ಹೇಳಿದರು.

ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಏರ್ಪಡಿಸಿದ್ದ ಭಾರತ ಸೇವಾ ದಳದ ರಾಷ್ಟ್ರಧ್ವಜ ಶಿಬಿರವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಶಿಸ್ತುಬದ್ಧ ಜೀವನರೂಢಿಸುವ ಅಗತ್ಯವಿದೆ. ನಾಲ್ಕು ಗೋಡೆಗಳ ನಡುವಿನ ಶಿಕ್ಷಣ ಪರಿಪೂರ್ಣವಲ್ಲ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಸೇವಾದಳ, ಸ್ಕೌಟ್ ಹಾಗೂ ಗೈಡ್ಸ್ ಇಂತಹ ಸಂಘಟನೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಣೆ ನೀಡಬೇಕು ಎಂದರು.

ಸೇವಾದಳದ ತಾಲ್ಲೂಕು ಪ್ರಮುಖ ರಾಘವೇಂದ್ರ ರಾಷ್ಟ್ರಧ್ವಜದ ಕುರಿತು ಹಾಗೂ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಸೇವಾದಳ ಬೆಳೆದುಬಂದ ದಾರಿ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಹುಲಿದೇವರಬನ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ. ಸದಾನಂದಸ್ವಾಮಿ `ಕುಸುಮಗಳ ಕಲರವ~ ಮಕ್ಕಳ ಹಸ್ತಪ್ರತಿಯನ್ನು ಬಿಡುಗಡೆ ಮಾಡಿದರು.

ಎಸ್ಡಿಎಂಸಿಯ ಸುಧಾ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯೆ ಸಂಗೀತಾ ಸಂತೋಷ್, ಶಿಕ್ಷಣ ಇಲಾಖೆಯ ಬಿ.ಎಚ್. ಶೇಖರಪ್ಪ, ಎಂ.ಪಿ. ಸತ್ಯನಾರಾಯಣ, ಮನೋಹರ, ಸೇವಾದಳದ ಜಿಲ್ಲಾ ಸದಸ್ಯ ವೆಂಕಟೇಶ್, ತಾಲ್ಲೂಕು ಕಾರ್ಯದರ್ಶಿ ಗವಿಯಪ್ಪ, ಖಜಾಂಚಿ ಮಹೇಶ್ ಉಪಸ್ಥಿತರಿದ್ದರು.

ಗೌರಮ್ಮ ಜಿ. ಸ್ವಾಗತಿಸಿದರು. ಕೆ.ಎಚ್. ಧನಂಜಯ ವಂದಿಸಿದರು. ಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.