ಗುರುವಾರ , ಮೇ 6, 2021
32 °C

ರಾಷ್ಟ್ರಪತಿಗೆ 2ಜಿ ಪ್ರಸ್ತಾವ ಕೇಂದ್ರ ಸಂಪುಟ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ತರಂಗಾಂತರ ಹಂಚಿಕೆ (2ಜಿ) ಹಗರಣದಲ್ಲಿ ವಿಚಾರಣೆ ಕೈಗೊಂಡಿದ್ದ ಸುಪ್ರೀಂಕೋರ್ಟ್ 122 ಕಂಪೆನಿಗಳ ಲೈಸನ್ಸ್ ರದ್ದು ಮಾಡಿದ್ದು ಇದನ್ನು ತೆರವುಗೊಳಿಸಲು ಕೋರಿ ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರ ಪರಾಮರ್ಶೆಗೆ ಕಳುಹಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ.ಲೈಸನ್ಸ್ ಕೋರಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡುವ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಬೇಕು,  ಹರಾಜಿನಲ್ಲಿ ಪಾಲ್ಗೊಳ್ಳದ ನಾರ್ವೆಯ ಟೆಲಿನಾರ್ ಕುರಿತು ಮುಂದೇನು ಮಾಡಬಹುದು ಎಂಬಿತ್ಯಾದಿ ಅಂಶಗಳು ರಾಷ್ಟ್ರಪತಿಗೆ ಕಳುಸಿದ ಪರಾಮರ್ಶೆ ನಿರ್ಣಯದಲ್ಲಿದೆ. ಸಂವಿಧಾನದ ಕಲಂ 143 ಅನ್ವಯ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಷ್ಟ್ರಪತಿಗಳು ಸುಪ್ರೀಂಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಬಹುದಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.