ಭಾನುವಾರ, ಏಪ್ರಿಲ್ 11, 2021
21 °C

ರಾಷ್ಟ್ರಭಕ್ತಿ-ಸ್ವಾಭಿಮಾನ ಬೆಳೆದು ಬರಲಿ:ರಂಭಾಪುರಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು: ಯುವ ಜನಾಂಗದಲ್ಲಿ ರಾಷ್ಟ್ರಭಕ್ತಿ- ಸ್ವಾಭಿಮಾನ ಬೆಳೆಸಿ ಕೊಳ್ಳುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಿದೆ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ಹೋರಾಟ ನಡೆಸಿದವರ ತ್ಯಾಗ ಔದಾರ್ಯವನ್ನು ಯಾರೂ ಮರೆಯ ಬಾರದು ಎಂದು  ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.ಇಲ್ಲಿನ ರಂಭಾಪುರಿ ಪೀಠದ ಜಗ ದ್ಗುರು ರುದ್ರ ಮುನೀಶ್ವರ ವಸತಿ ಪ್ರೌಢಶಾಲೆ ಮತ್ತು ವೀರಭದ್ರಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಯುಕ್ತವಾಗಿ ಎರ್ಪಡಿಸಿದ್ದ 66ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ಮಾತನಾ ಡಿದರು. ಹೂಲಿ ಹೀರೆಮಠದ ಶಿವಮಹಾಂತ ಶಿವಾಚಾರ್ಯ, ಹಲ ಗೂರು ಬೃಹನ್ಮಠದ ರುದ್ರಮುನಿ ಶಿವಾ ಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಮಖ್ಯಶಿಕ್ಷಕ ಸದಾನಂದ, ಕಟ್ಟೇಗೌಡ, ವೀರೇಶ ಕುಲಕರ್ಣಿ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.