ಭಾನುವಾರ, ಮೇ 16, 2021
27 °C

ರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ ಕರ್ನಾಟಕ ತಂಡಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಲ್ಕತ್ತದಲ್ಲಿ ಸೆಪ್ಟೆಂಬರ್ 10 ರಂದು ಆರಂಭವಾಗಲಿರುವ ನಾಲ್ಕು ದಿನಗಳ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡಗಳು ಭಾಗವಹಿಸಲಿವೆ.ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಕರ್ನಾಟಕ ಪುರುಷರ ಮತ್ತು ಮಹಿಳಾ ತಂಡಕ್ಕೆ ಆಯ್ಕೆಮಾಡಲಾದ ಸ್ಪರ್ಧಿಗಳ ಹೆಸರನ್ನು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ  ಮಂಗಳವಾರ ಬಿಡುಗಡೆ ಮಾಡಿತು. ಪಟ್ಟಿ ಇಂತಿದೆ.ಪುರುಷರ ವಿಭಾಗ: ಜಿ.ಎನ್. ಬೋಪಣ್ಣ, ಜಗದೀಶ್, ಸೋನಿತ್ ಮೆಂಡನ್, ಎಂ. ಅರ್ಷದ್, ವಿದ್ಯಾಸಾಗರ್, ಸಂಜಯ್ ವಿ. ಹರ್ಷಿತ್, ಸುಪ್ರೀತ್‌ರಾಜ್, ಕೆ. ರಾಕೇಶ್, ಜಿ. ಪ್ರದೀಪ್, ಸುರೇಂದರ್ ಕುಮಾರ್, ಚಂದ್ರಶೇಖರ್, ರಂಜನ್ ಕಾರ್ಯಪ್ಪ ಹಾಗೂ ಪಿ.ಜೆ. ಪುರಂದರ್.ಮಹಿಳಾ ವಿಭಾಗ: ಮಂಜುಶ್ರೀ, ರೆಬಕ್ಕಾ ಜೋಸ್, ಬೇಬಿ ಸೌಮ್ಯ, ಶಾಲಿನಿ ನಾಯಕ್, ಜಿ.ಎಂ. ಐಶ್ವರ್ಯ, ತಿಪ್ಪವ್ವ ಸಣ್ಣಕ್ಕಿ, ಕೆ.ಸಿ. ಶ್ರುತಿ, ಕೆ.ಸಿ. ಮಮತಾ, ಶಹಜಹಾನಿ, ಕೆ. ವಕಾರಿ, ನೀಲಮ್ಮ, ಎಂ.ಆರ್. ಪೂವಮ್ಮ, ಜಾಯಿಲಿನೆ ಎಂ. ಲೋಬೊ, ಅಂಜು ಬೆನ್ನಿ , ಪಿ.ಎಂ. ಮಂಜು, ರೀನಾ    ಜಾರ್ಜ್ ಹಾಗೂ ಹೇಮಲತಾ. ಮ್ಯಾನೇಜರ್: ಜಯರಾಮಯ್ಯ, ಕೋಚ್: ಏಂಜೆಲ್ ಮೇರಿ ಜೋಸೆಫ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.