ಬೆಂಗಳೂರು: ಇದೇ ಮೊದಲ ಬಾರಿ ನಡೆಯಲಿರುವ ಇಂಡಿಯನ್ ನ್ಯಾಷನಲ್ ಆಟೋಕ್ರಾಸ್ ಚಾಂಪಿಯನ್ಷಿಪ್ಗೆ (ಐಎನ್ಎಸಿ) ಉದ್ಯಾನನಗರಿಯಲ್ಲಿ ಮುಂದಿನ ತಿಂಗಳು ಚಾಲನೆ ಲಭಿಸಲಿದೆ. ಮೊದಲ ಸುತ್ತಿನ ಸ್ಪರ್ಧೆ ಬೆಂಗಳೂರಿನಲ್ಲಿ ಏಪ್ರಿಲ್ 28 ಮತ್ತು 29 ರಂದು ನಡೆಯಲಿದೆ. ಐಎನ್ಸಿಎ ಬೆಂಗಳೂರು ಒಳಗೊಂಡಂತೆ ಒಟ್ಟು ಐದು ನಗರಗಳಲ್ಲಿ ನಡೆಯಲಿವೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಫ್ಎಂಎಸ್ಸಿಐ ಹಾಗೂ ಪ್ರಾಯೋಜಕರಾದ ವಿನ್ಸ್ಪೋರ್ಟ್ಸ್ ಮತ್ತು ಆ್ಯನ್ ಓಪನ್ ಮೈಂಡ್ (ಎಒಎಂ) ಜಂಟಿಯಾಗಿ ಪ್ರಸಕ್ತ ಋತುವಿನ ಸ್ಪರ್ಧೆಗಳ ವಿವರಗಳನ್ನು ಪ್ರಕಟಿಸಿತು.

ಎರಡರಿಂದ ಐದನೇ ಸುತ್ತಿನವರೆಗಿನ ಸ್ಪರ್ಧೆಗಳನ್ನು ಕೊಚ್ಚಿ (ಮೇ 26, 27), ಕೊಯಮತ್ತೂರು (ಜುಲೈ 14, 15), ಚೆನ್ನೈ (ಸೆಪ್ಟೆಂಬರ್ 15, 16) ಮತ್ತು ಮುಂಬೈ (ನವೆಂಬರ್ 3,4) ನಗರಗಳಲ್ಲಿ ಆಯೋಜಿಸಲಾಗಿದೆ.

ಚಾಂಪಿಯನ್ಷಿಪ್ನ ಕೊನೆಯ ಸುತ್ತಿನ ಸ್ಪರ್ಧೆ ಬೆಂಗಳೂರಿನಲ್ಲಿ ಡಿಸೆಂಬರ್ 8 ಮತ್ತು 9 ರಂದು ನಡೆಯಲಿದೆ ಎಂದು ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಗಳ ಒಕ್ಕೂಟದ (ಎಫ್ಎಂಎಸ್ಸಿಐ) ಉಪಾಧ್ಯಕ್ಷ ಆರ್. ಭರತ್ರಾಜ್ ನುಡಿದರು. `ಮೋಟಾರ್ ಸ್ಪೋರ್ಟ್ಸ್ ಪ್ರೇಮಿಗಳಿಂದ ಈ ಚಾಂಪಿಯನ್ಷಿಪ್ಗೆ ಉತ್ತಮ ಬೆಂಬಲ ದೊರೆಯುವ ವಿಶ್ವಾಸವಿದೆ~ ಎಂದು ಹೇಳಿದರು.

ಐಎನ್ಎಸಿಗೆ ಇದೀಗ ಎಫ್ಎಂಎಸ್ಸಿಐ ಕ್ಯಾಲೆಂಡರ್ನ ಪ್ರಮುಖ ಸ್ಪರ್ಧೆಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ವಿನ್ಸ್ಪೋರ್ಟ್ಸ್ನ ಮುಖ್ಯ ಕಾರ್ಯನಿರ್ವಾಹಕ ಬಾಲಕೃಷ್ಣ ಜಯಸಿಂಹ ಚಾಂಪಿಯನ್ಷಿಪ್ನ ವಿವರಗಳನ್ನು ನೀಡಿದರು. `ಕಾರುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಫಾರಿನ್ ಓಪನ್ ಕ್ಲಾಸ್ ವಿಭಾಗ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುವುದು~ ಎಂದರು.

ಬೆಂಗಳೂರಿನಲ್ಲಿ ಸ್ಪರ್ಧೆ ನಡೆಯುವ ತಾಣವನ್ನು ಏಪ್ರಿಲ್ ಮೊದಲ ವಾರದಲ್ಲಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು. ಪ್ರಮುಖ ಚಾಲಕರಾದ ಲೋಹಿತ್ ಅರಸ್, ಕರಣ್ ಮತ್ತು ರಾಹುಲ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.