ಉಪ್ಪಿನಂಗಡಿ: ಸತತ ಮಳೆಯಿಂದಾಗಿ, ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ಗುಂಡ್ಯ ಹೊಳೆಯ ನೀರು ರಸ್ತೆಗೆ ಹರಿದು ಸೋಮವಾರ ರಾತ್ರಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ಮಂಗಳೂರಿನಿಂದ ರಾತ್ರಿ ಬೆಂಗಳೂರಿಗೆ ಸಂಚಾರ ಆರಂಭಿಸಿದ ಬಸ್ಗಳು ಶಿರಾಡಿ ಘಾಟಿಯ ಬಳಿ ಪ್ರಯಾಣ ಮುಂದುವರಿಸಲು ಸಾಧ್ಯವಾಗಿಲ್ಲ. `ರಾತ್ರಿ ಸುಮಾರು 10.45 ರಿಂದ ಮಧ್ಯರಾತ್ರಿಯಾದರೂ ಪ್ರವಾಹದ ಮಟ್ಟ ಕಡಿಮೆಯಾಗದ ಕಾರಣ ಸಂಚಾರಕ್ಕೆ ಸಮಸ್ಯೆಯಾಗಿದೆ. ಕೆಲವು ವಾಹನಗಳು ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ತೆರಳಿದವು~ ಎಂದು ವಾಹನ ಚಾಲಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಕೆಲವು ಖಾಸಗಿ ವಾಹನಗಳು ಮಾಣಿ- ಸುಳ್ಯ- ಮಡಿಕೇರಿ -ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.