ರಿಯೊ ಒಲಿಂಪಿಕ್ಸ್ : ಕೈ ತಪ್ಪಿದ ಪದಕ, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಬಿಂದ್ರಾ

ರಿಯೋ ಡಿ ಜನೈರೋ: ರಿಯೊ ಒಲಿಂಪಿಕ್ಸ್ 10 ಮೀ ಏರ್ ರೈಫಲ್ ಫೈನಲ್ ಪಂದ್ಯದಲ್ಲಿ ಭಾರತೀಯ ಶೂಟರ್ ಅಭಿನವ್ ಬಿಂದ್ರಾ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಶೂಟ್ ಆಫ್ನಲ್ಲಿ ಬಿಂದ್ರಾ ಎಡವಿದ್ದು, ಇಟೆಲಿಯ ನಿಕೋಲೋ ಕಂಪ್ರಿಯಾನಿ ಚಿನ್ನ ಗೆದ್ದಿದ್ದಾರೆ.
2008ರಲ್ಲಿ ಬೀಜಿಂಗ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಬಿಂದ್ರಾ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿದ್ದರು, ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಚಾಂಪಿಯನ್ ಆಗಿದ್ದ ಬಿಂದ್ರಾ ಮೇಲೆ ಈ ಬಾರಿ ಭಾರತದ ಜನತೆ ಸಾಕಷ್ಟು ನಿರೀಕ್ಷೆಯನ್ನಿಟ್ಟಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.