ರಿಸರ್ವ್ ಬ್ಯಾಂಕ್ ನಿಂದ ರೂ.10 ರ ಹೊಸ ನಾಣ್ಯ

7

ರಿಸರ್ವ್ ಬ್ಯಾಂಕ್ ನಿಂದ ರೂ.10 ರ ಹೊಸ ನಾಣ್ಯ

Published:
Updated:

ಚಂಡೀಗಡ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಮೃತ ಮಹೋತ್ಸವದ ಸಂದರ್ಭದಲ್ಲಿ  ರೂ.10ರ ರ ಹೊಸ  ನಾಣ್ಯವನ್ನು ಚಲಾವಣೆಗೆ ತರಲಿದೆ.

ನಾಣ್ಯದ ಮುಖಭಾಗದ ಮಧ್ಯದಲ್ಲಿ ಅಶೋಕ ಸ್ತಂಭದ ಉಬ್ಬುಶಿಲ್ಪ ಹಾಗೂ ಇನ್ನೊಂದು ಬದಿಯಲ್ಲಿ  ಭಾರತೀಯ ರಿಸರ್ವ್ ಬ್ಯಾಂಕ್ ನ ಲಾಂಛನವಾದ ತಾಳೆಮರ ಮತ್ತು ಹುಲಿಯ ಚಿತ್ರವಿದ್ದು, ಲಾಂಛನದ ಕೆಳಭಾಗದಲ್ಲಿ  1935-2011 ವರ್ಷವನ್ನು ನಮೂದಿಸಲಾಗಿರುತ್ತದೆ ಎಂದು ಆರ್ ಬಿ ಐ ಪ್ರಕಟಣೆ ತಿಳಿಸಿದೆ.

ಭಾರತ ಸರ್ಕಾರದ 1906ರ ನಾಣ್ಯ ಖಾಯ್ದೆಯ ಪರಿಚ್ಚೇದ 15 ಎ  ಅನುಸಾರ  25 ಪೈಸೆಯ ನಾಣ್ಯದ ಚಲಾವಣೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, 2011ರ ಜೂನ್ 20ರಿಂದ ಇದು ಜಾರಿಗೆ ಬರಲಿದೆ, ಈ ನಾಣ್ಯದ ಬದಲಿ ನಾಣ್ಯವನ್ನು 2011ರ ಜುಲೈ 1ರ ಒಳಗೆ ನಿರ್ದಿಷ್ಟ ಬ್ಯಾಂಕ್ ಶಾಖೆಗಳಲ್ಲಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry