ಮುಂಬೈ(ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಸೋಮವಾರ 110 ಪೈಸೆಗಳಷ್ಟು ಕುಸಿದಿದ್ದು, ಸಾರ್ವಕಾಲಿಕ ದಾಖಲೆ ಮಟ್ಟವಾದ ರೂ58.16ಕ್ಕೆ ಇಳಿಕೆ ಕಂಡಿದೆ.

ರೂಪಾಯಿ ಮೌಲ್ಯ ಕುಸಿತವು ಆಮದು ಹೊರೆ ಹೆಚ್ಚಿಸಲಿದ್ದು, ಇದರಿಂದ ದೇಶದ `ಚಾಲ್ತಿ ಖಾತೆ ಕೊರತೆ'(ಸಿಎಡಿ) ಇನ್ನಷ್ಟು ಹೆಚ್ಚಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬ್ಯಾಂಕುಗಳು ಮತ್ತು ರಫ್ತುದಾರರಿಂದ ಡಾಲರ್ ಬೇಡಿಕೆ ಹೆಚ್ಚಿರುವುದು ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದೆ. ಷೇರುಪೇಟೆಗೆ `ವಿದೇಶಿ ಸಾಂಸ್ಥಿಕ ಹೂಡಿಕೆದಾರರ'(ಎಫ್ಐಐ) ಬಂಡವಾಳದ ಒಳಹರಿವು ತಗ್ಗಿರುವುದು ಕೂಡ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಿಸಿದೆ. ಒಟ್ಟಿನಲ್ಲಿ ಏಪ್ರಿಲ್ 30ರಂದು ರೂ53.80ರಷ್ಟಿದ್ದ ರೂಪಾಯಿ ಮೌಲ್ಯ ಇಲ್ಲಿಯವರೆಗೆ ಶೇ 8ರಷ್ಟು ಕುಸಿತ ಕಂಡಿದೆ.

`ರೂಪಾಯಿ ಅಪಮೌಲ್ಯ ತಪ್ಪಿಸಲು `ಭಾರತೀಯ ರಿಸರ್ವ್ ಬ್ಯಾಂಕ್'(ಆರ್ಬಿಐ) ಮಧ್ಯಪ್ರವೇಶಿಸುವ ಅಗತ್ಯ ಇದೆ' ಎಂದು ವಿದೇಶಿ ವಿನಿಮಯ ವಹಿವಾಟು ನಡೆಸುವ ಸಂಸ್ಥೆಗಳು ಹೇಳಿವೆ.

ಡಾಲರ್ಬೇಡಿಕೆ ತಗ್ಗಿಸಲು ಬ್ಯಾಂಕುಗಳ ಮೇಲೆ `ಆರ್ಬಿಐ' ನಿರ್ಬಂಧ ಹೇರಬಹುದು ಎಂಬ ಅಭಿಪ್ರಾಯವೂ ಮಾರುಕಟ್ಟೆ ತಜ್ಞರಿಂದ ವ್ಯಕ್ತವಾಗಿದೆ.

`ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಮಾರುಕಟ್ಟೆಯಲ್ಲಿ ಅನಗತ್ಯ ಭಯ ಸೃಷ್ಟಿಯಾಗಿದೆ. ಜನರು ದಿಗಿಲುಗೊಳ್ಳುವ ಅಗತ್ಯ ಇಲ್ಲ' ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಅರವಿಂದ್ ಮಯರಾಂ ಹೇಳಿದ್ದಾರೆ.

ವಿನಿಮಯ ದರದಲ್ಲಿ ಸ್ಥಿರತೆ ತರಲು ಆರ್ಬಿಐ ಮಧ್ಯಪ್ರವೇಶಿಸದಿದ್ದರೆ ರೂಪಾಯಿ ಮೌಲ್ಯ ರೂ60ರ ಗಡಿ ದಾಟಬಹುದು ಎಂದು `ಜಿಯೊಜಿತ್ ಕಾಂಟ್ರೇಡ್' ಸಂಸ್ಥೆಯ ಕರೆನ್ಸಿ ತಜ್ಞರಾದ ಹೇಮಲ್ ಜೋಶಿ ಭವಿಷ್ಯ ನುಡಿದಿದ್ದಾರೆ.

ರಿಯಾಯ್ತಿಗೆ ಒತ್ತಡ
ರೂಪಾಯಿ ವಿನಿಮಯ ಮೌಲ್ಯ ಕುಸಿದಿರುವುದರಿಂದ ರಫ್ತುದಾರರಿಗೆ ಹೆಚ್ಚಿನ ಲಾಭ ಲಭಿಸಿದೆ. ಆದರೆ, ಖರೀದಿದಾರರು ತಮಗೆ ಶೇ 10ರಿಂದ ಶೇ 15ರಷ್ಟು ರಿಯಾಯ್ತಿ ನೀಡಬೇಕು ಎಂದು ರಫ್ತುದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಭಾರತೀಯ ರಫ್ತುದಾರರ ಒಕ್ಕೂಟ(ಎಫ್ಐಇಒ) ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.