ಭಾನುವಾರ, ಜೂನ್ 13, 2021
29 °C

ರೂ. 1.25 ಕೋಟಿಗೆ ಬಾಹ್ಯಾಕಾಶ ಪಯಣದ ಅನುಭವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಐಎಎನ್‌ಎಸ್‌): ಬಾಹ್ಯಾ­ಕಾಶ­ದಲ್ಲಿ ಹಾರಾಟ ನಡೆಸಿ, ಅದರ ಅನುಭವ ಪಡೆಯಬೇಕೆಂಬ ಕನಸು ಈಗ ನನಸು ಮಾಡಿಕೊಳ್ಳ­ಬಹುದು.  ನಿಮ್ಮಲ್ಲಿ  ರೂ.  1.25 ಕೋಟಿ ಹಣವಿದ್ದರೆ ಸಾಕು, ಭೂಮಿಯಿಂದ 100 ಕಿ.ಮೀ ಎತ್ತರದಲ್ಲಿ ಬಾಹ್ಯಾಕಾಶ ಯಾತ್ರೆಯ ಅನುಭವ ಕಟ್ಟಿಕೊಳ್ಳಬಹುದು. ಬಾಹ್ಯಾಕಾಶ  ಯಾತ್ರೆ ಆಯೋಜ­ನೆ­ಯಲ್ಲಿ ಮುಂಚೂಣಿಯಲ್ಲಿರುವ ಯೂರೋ­ಪಿನ ಆಸ್ಟ್ರಿಯಮ್‌ ಏರ್‌ ಬಸ್‌ ಕಂಪೆನಿ ಈ ಅವಕಾಶ ಕಲ್ಪಿ­ಸುತ್ತಿದೆ.  ಮುಂಬರುವ ಮೇ ತಿಂಗಳಲ್ಲಿ ಆಸ್ಟ್ರಿ­ಯಮ್‌ ಗಗನನೌಕೆಯು ಸಿಂಗಪುರ­ದಲ್ಲಿ 10 ಸಾವಿರ ಅಡಿ ಎತ್ತರದಲ್ಲಿ ತನ್ನ ಮೊದಲ ಯಾತ್ರೆ ನಡೆಸುತ್ತದೆ.ಮೊದಲ ಯಾತ್ರೆ ಯಶಸ್ವಿಯಾದರೆ ಎರಡನೇ ಬಾರಿ  ಲಕ್ಷ ಅಡಿ ಎತ್ತರದಲ್ಲಿ ಹಾರಾಟ ನಡೆಸಲಿದೆ ಎಂದು ಆಸ್ಟ್ರಿ­ಯಮ್‌ ಅಧಿಕಾರಿಗಳು ತಿಳಿಸಿದ್ದಾರೆ.ಯಾತ್ರೆಯ ಅವಧಿ ಎರಡು ಗಂಟೆಯದಾಗಿದ್ದು, ಈ ನೌಕೆಯು 15 ಅಡಿ ಉದ್ದ ಹಾಗೂ ಮಾಮೂಲಿ ಬಾಹ್ಯಾಕಾಶ ನೌಕೆಯ ಕಾಲು ಭಾಗದ ವಿಸ್ತೀರ್ಣ ಹೊಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.