ಹುಬ್ಬಳ್ಳಿ: ಹಾಡುಹಗಲೇ ಮೂವರು ಮಹಿಳೆಯರ ಮಾಂಗಲ್ಯ ಸರ ಅಪಹರಣ ಸೇರಿದಂತೆ ಕಳೆದ 24 ಗಂಟೆಯಲ್ಲಿ ಐದು ಸರಗಳ್ಳತನ ಪ್ರಕರಣಗಳು ನಗರದ ವಿವಿಧೆಡೆ ನಡೆದಿವೆ.ಮಂಗಳವಾರ ಮಧ್ಯಾಹ್ನ ಇಲ್ಲಿನ ವಿದ್ಯಾನಗರದ ಬನಶಂಕರಿ ಬಡಾವಣೆ, ಸಿದ್ಧಾರೂಢ ಮಠದ ಬಳಿಯ ಶ್ರೀನಿವಾಸ ನಗರ, ಲಿಂಗರಾಜನಗರದ ಉತ್ತರಾದಿ ಮಠದ ಬಳಿ ಮಹಿಳೆಯರ ಸರ ಅಪಹರಣ ನಡೆದಿದೆ. ವಿಜಯ ನಗರದ ರೆವಿನ್ಯೂ ಕಾಲೊನಿ ಹಾಗೂ ವಾಸವಿ ನಗರದಲ್ಲಿ ಸೋಮವಾರ ಸಂಜೆ ದುಷ್ಕರ್ಮಿಗಳು ಮಹಿಳೆಯ ಸರ ಅಪಹರಿಸಿದ್ದಾರೆ.

ಬಹುತೇಕ ನಿರ್ಜನ ಪ್ರದೇಶಗಳಲ್ಲಿ ವೃದ್ಧರು ಹಾಗೂ ಒಂಟಿ ಮಹಿಳೆಯರ ಚಿನ್ನ ಅಪಹರಣ ನಡೆದಿದ್ದು, ಐದು ಪ್ರಕರಣಗಳಲ್ಲಿ ರೂ 4.8 ಲಕ್ಷ ರೂಪಾಯಿ ಮೌಲ್ಯದ 160 ಗ್ರಾಂ. ಚಿನ್ನ ಕಳವು ಮಾಡಲಾಗಿದೆ.

ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬನಶಂಕರಿ ಬಡಾವಣೆಯಲ್ಲಿ ವಾಸವಾಗಿರುವ ಶಕುಂತಲಾ ಬಸವಣ್ಣೆಪ್ಪ ಹಸಬಿ (50) ಮಧ್ಯಾಹ್ನ 12.30ರ ವೇಳೆಯಲ್ಲಿ ಸಂತೆ ಮುಗಿಸಿಕೊಂಡು ವಾಪಸ್ ಮನೆಗೆ ಬರುವಾಗ ಬನಶಂಕರಿ ದೇವಸ್ಥಾನದ ಬಳಿ ಅವರನ್ನು ಹಿಂಬಾಲಿಸಿದ ಆರೋಪಿ ಚಿನ್ನದ ಸರ ಕಿತ್ತುಕೊಂಡು ಮುಂದೆ ಬೈಕ್ನಲ್ಲಿ ಕಾಯುತ್ತಿದ್ದ ಸಹಚರನೊಂದಿಗೆ ಪರಾರಿಯಾಗಿದ್ದಾನೆ.

ಲಿಂಗರಾಜ ನಗರದ ಉತ್ತರಾದಿಮಠದ ಬಳಿ ರಾತ್ರಿ 8.30ರ ವೇಳೆಗೆ ನಡೆದುಕೊಂಡು ಹೊರಟಿದ್ದ ವಿದ್ಯಾಶ್ರೀ ಬಸವರಾಜ ಹೊನ್ನಾಪುರ (30) ಅವರನ್ನು ಹಿಂಬಾಲಿಸಿದ ಅಪರಿಚಿತ 35 ಗ್ರಾಂ ಚಿನ್ನದ ಮಾಂಗಲ್ಯ ಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಸ ನಗರದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಹಾಲು ತರಲು ಅಂಗಡಿಗೆ ಹೊರಟಿದ್ದ ಯೋಗೀಶ್ವರಿ ಸದಾನಂದ ಮೂಲ್ಯ (35) ಎಂಬ ಮಹಿಳೆಯ 42 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ನೀಲಿ ಹಾಗೂ ನೇರಳೆ ಬಣ್ಣದ ಕರಿಷ್ಮಾ ಬೈಕ್ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಟೀಶರ್ಟ್, ಪ್ಯಾಂಟ್ ಧರಿಸಿದ್ದರು ಎಂದು ಯೋಗೀಶ್ವರಿ ಪೊಲೀಸರಿಗೆ ತಿಳಿಸಿದ್ದಾರೆ.

ಸೋಮವಾರ ಸಂಜೆ 7.30ರ ವೇಳೆಯಲ್ಲಿ ಹೊಸಬಸ್ ನಿಲ್ದಾಣದಿಂದ ವಾಸವಿ ನಗರದ ಮನೆಗೆ ಹೊರಟಿದ್ದ ರಾಧಾ ರಾಜೇಂದ್ರ ಸಿಂಗ್ (45) ಎಂಬ ಮಹಿಳೆಯ 25 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಈ ಬಗ್ಗೆ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರದ ರೆವೆನ್ಯೂ ಕಾಲೊನಿಯಲ್ಲಿ ಮೊಮ್ಮಗಳೊಂದಿಗೆ ಹೊರಟಿದ್ದ ಶೀಲಾ ಚೆನ್ನಪಟ್ಟಣ (73) ಎಂಬ ವೃದ್ಧೆಯ ಕೊರಳಲ್ಲಿದ್ದ 24 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್ನಲ್ಲಿ ಬಂದ ಮೂವರು ಅಪಹರಿಸಿದ್ದಾರೆ.

ದುರದೃಷ್ಟಕರ ಬೆಳವಣಿಗೆ: `ಇದು ದುರದೃಷ್ಟಕರ ಬೆಳವಣಿಗೆ~.. 24 ಗಂಟೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸರಣಿ ಸರ ಅಪಹರಣ ಪ್ರಕರಣಗಳ ಬಗ್ಗೆ ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ `ಪ್ರಜಾವಾಣಿ~ಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಅವಳಿ ನಗರದ ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ಕಾವಲು ಹಾಕಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಮಹಿಳೆಯರು ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಈ ಮಧ್ಯೆ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ 10 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.