ಗುರುವಾರ , ಮೇ 19, 2022
24 °C
ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಸಾಧನೆ

ರೂ.14.73 ಕೋಟಿ ರಾಜಸ್ವ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಹುಣಸೂರು ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯು ಸರ್ಕಾರ ನೀಡಿದ ಗುರಿ ಮೀರಿ ರಾಜಸ್ವ ವಸೂಲಿ ಮಾಡಿ ದಾಖಲೆ ನಿರ್ಮಿಸಿದೆ.ರಾಜ್ಯ ಸರ್ಕಾರ 2012-13ನೇ ಸಾಲಿಗೆ ಹುಣಸೂರು ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಗೆ ನೀಡಿದ ಗುರಿ ರೂ 12.80 ಕೋಟಿ ಆಗಿತ್ತು. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳ ಸಹಕಾರದಿಂದ ಸರ್ಕಾರ ನೀಡಿದ ಗುರಿ ಮೀರಿ ರೂ 14.73 ಕೋಟಿ ರಾಜಸ್ವ ವಸೂಲಾತಿ ಮಾಡಿಲಾಗಿದೆ ಎಂದು ಹುಣಸೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಿಸೋಜ ತಿಳಿಸಿದರು.ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಕಳೆದ ಸಾಲಿನ ಹಣಕಾಸು ವರ್ಷದಲ್ಲಿ ರೂ 1.93 ಕೋಟಿ ಹೆಚ್ಚು ಆದಾಯ ಗಳಿಸಿ  ಶೇ 115.10ರಷ್ಟು ಗುರಿ ಸಾಧಿಸಿದೆ. 2013-14ನೇ ಸಾಲಿನಲ್ಲಿ ಮೇ ತಿಂಗಳವರಗೆ ಇಲಾಖೆ ರೂ 293.7 ಲಕ್ಷ ವಸೂಲಿ ಮಾಡಿ ಶೇ 112.9ರಷ್ಟು ಗುರಿ ಸಾಧಿಸಿದೆ ಎಂದರು.ಹುಣಸೂರು ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕಳೆದ ಸಾಲಿನಲ್ಲಿ ಒಟ್ಟು 7,356 ವಾಹನಗಳನ್ನು ತಪಾಸಣೆ ಮಾಡಿ ಇವುಗಳಲ್ಲಿ 1,812 ವಾಹನಗಳಿಗೆ ರೂ 73,50,842 ತೆರಿಗೆ ಮತ್ತು ರೂ 18,42,400 ದಂಡ ವಿಧಿಸಲಾಗಿದೆ.ಒಟ್ಟಾರೆ ವಾಹನ ತನಿಖೆಯಿಂದ ರೂ 92,03,242 ವಸೂಲಿ ಮಾಡಲಾಗಿದೆ.ಪ್ರಸಕ್ತ ಸಾಲಿನಲ್ಲಿ ಮೇ ಅಂತ್ಯದವರಗೆ 2,707 ವಾಹನಗಳನ್ನು ತಪಾಸಣೆ ಮಾಡಿ 492 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವುಗಳಿಂದ ರೂ 21,78,298 ತೆರಿಗೆ ಮತ್ತು ರೂ 31,5200 ದಂಡ ಒಟ್ಟು ರೂ 24,93,498 ವಸೂಲಿ ಮಾಡಲಾಗಿದೆ ಎಂದರು. ಕಳೆದ ಸಾಲಿನಲ್ಲಿ ಒಟ್ಟು 12,525 ವಾಹನಗಳನ್ನು ನೋಂದಾಯಿಸಿಕೊಂಡು, 11,053 ಚಾಲಕರಿಗೆ ಲೈಸೆನ್ಸ್ ನೀಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.