ಸೋಮವಾರ, ಜೂಲೈ 13, 2020
29 °C

ರೂ.90 ಕೋಟಿ ಪ್ರಸ್ತಾವನೆ: ವರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು:  ಡಾ.ಬಾಬು ಜಗಜೀವನರಾಮ ಚರ್ಮ ಕೈಗಾರಿಕಾ ಅಭಿವೃದ್ಧಿಗೆ ನಿಗಮ(ಲಿಡಕರ್) ಸಂಸ್ಥೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ 90ಕೋಟಿ ಹಾಗೂ ರಾಜ್ಯ ಸರ್ಕಾರಕ್ಕೆ 25ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ಈಗಾಗಲೇ 10ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ರಾಜೇಂದ್ರವರ್ಮ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಡಾ.ಬಾಬು ಜಗಜೀವನರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಎಂದು ಬದಲಾವಣೆ ಮಾಡಲಾಗಿದೆ ಎಂದು ರಾಜ್ಯದಲ್ಲಿ ಚರ್ಮೋದ್ಯಮ ಬೆಳವಣಿಗೆಗೆ ಹಾಗೂ ಪರಿಶಿಷ್ಟ ಜಾತಿ ಚರ್ಮ ಕುಶಲಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆಯಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿಗಮದಿಂದ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.ಕಳೆದ ಮೂರ್ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ಲಿಡಕರ್ ಸಂಸ್ಥೆಗೆ ಬರ ಬೇಕಾದ ಸಬ್ಸಿಡಿ ಅನುದಾನವು ಬಿಡುಗಡೆಗೊಳಿಸಿಲ್ಲ. ಹಿಂದೆ ಈ ಸಂಸ್ಥೆಯಲ್ಲಿದ್ದ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪತ್ರವ್ಯವಹಾರ ಸರಿಯಾಗಿ ಮಾಡದಿರುವುದೇ ಮುಖ್ಯ ಕಾರಣವಾಗಿದೆ ಎಂದು ದೂರಿದರು.ಈ ನಿಗಮದ ಯೋಜನೆ ಯಿಂದ ಸುಮಾರು 40 ಸಾವಿರ ಕುಶಲಕರ್ಮಿಗಳಿಗೆ ಅನು ಕೂಲವಾಗುತ್ತಿದೆ. ರಾಜ್ಯದಲ್ಲಿ ಲಕ್ಷಾಂತರ ಜನ ಇಂಥ ಉದ್ಯೋಗದ ಮೇಲೆ ಆಧಾ ರವಾಗಿದ್ದಾರೆ. ಈಚೆಗೆ ಲಿಡಕರ್ ಸಂಸ್ಥೆಯು ಆರ್ಥಿಕ ಸಂಕ ಷ್ಟದಲ್ಲಿದ್ದು, 2009- 10ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ನಿಗಮದ ಹೆಸರನ್ನು ಮರು ನಾಮಕರಣಗೊಳಿಸಿ ಪುನಶ್ಚೇತನಗೊಳಿಸುವುದಾಗಿ ಘೋಷಣೆ ಮಾಡಿದ್ದರು ಎಂದು ವಿವರಿಸಿದರು.ರಾಜ್ಯದಲ್ಲಿನ ಚರ್ಮೋದ್ಯಮದ ಬೆಳವಣಿಗೆ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳ ಶ್ರೇಯೋಭಿವೃದ್ದಿ ಹೊಂದುವ ನಿಟ್ಟಿನಲ್ಲಿ ಈ ನಿಗಮದ ಮೂಲ ಉದ್ದೇಶವಾಗಿದೆ. ಅಭಿವೃದ್ಧಿ ಚಟುವಟಿಕೆಗಳು: 1,801ಜನ ಕುಶಲಕರ್ಮಿಗಳಿಗೆ ವಸತಿ ಮತ್ತು ಕಾರ್ಯಾಗಾರಗಳ ನಿರ್ಮಾಣ, 29 ಸಾಮಾನ್ಯ ಕೇಂದ್ರಗಳ ನಿರ್ಮಾಣ, 10,046 ಜನರಿಗೆ ತರಬೇತಿ ನೀಡುವುದು, 26 ಸಾವಿರ ಜನರಿಗೆ ರಸ್ತೆಬದಿ ಕುಟೀರ ವಿತರಣೆಗೆ ಒತ್ತು ನೀಡಲಾಗಿದೆ. 168 ಜನರಿಗೆ ಚರ್ಮ ಕರಕುಶಲ ಸಪ್ತಾಹ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ನೀಡಲಾಗಿದೆ. 516 ಜನರಿಗೆ ಅಧ್ಯಯನ ಪ್ರವಾಸ ಕಾರ್ಯಕ್ರಮ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ವಿವರಣೆ ನೀಡಿದರು.ವಾಣಿಜ್ಯ ಚಟುವಟಿಕೆಗಳು: ವಾಣಿಜ್ಯ ಚಟುವಟಿಕೆಯಡಿಯಲ್ಲಿ 1,200 ಕುಶಲಕರ್ಮಿಗಳು ಹಾಗೂ 100ಕ್ಕಿಂತ ಹೆಚ್ಚು ಸಣ್ಣ ಪ್ರಮಾಣದ ಘಟಕಗಳು ತಯಾರಿಸುವಂಥ ಚರ್ಮೋತ್ಪನ್ನಗಳಿಗೆ ಮಾರುಕಟ್ಟೆ ಸೌಕರ್ಯ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.ಮಾರುಕಟ್ಟೆ ಸೌಕರ್ಯ: ರಾಜ್ಯದಲ್ಲಿರುವ 24 ಮಾರಾಟ ಮಳಿಗೆಗಳ ಮೂಲಕ ಮಾರಾಟದ ವ್ಯವಸ್ಥೆ, ರಾಜ್ಯದ ಹೊರ ಮತ್ತು ಒಳ ಪ್ರಮುಖ ಸ್ಥಳಗಳಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಇಲಾಖೆಗಳು ಹಾಗೂ ಸಂಘ ಸಂಸ್ಥೆ, ಖಾಸಗಿ ಸಂಸ್ಥೆಗಳಿಗೆ ಅಗತ್ಯವಿರುವ ಚರ್ಮೋತ್ಪನ್ನಗಳನ್ನು ಸರಬರಾಜು ಮಾಡುವಂಥ ವ್ಯವಸ್ಥೆ ಕೈಗೊಳ್ಳಲಾಗುವುದು. ಅಲ್ಲದೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮೇಳಗಳಲ್ಲಿಯೂ ಭಾಗವಹಿಸಿ ಮಾರಾಟ ಮಾಡುವ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು ಎಂದರು.ಪ್ರಗತಿ: 200-9ನೇ ಸಾಲಿನಲ್ಲಿ 2.91ಕೋಟಿಗಳು, 2009-10ನೇ ಸಾಲಿನಲ್ಲಿ 3.65 ಕೋಟಿಗಳ ಸಂಸ್ಥೆಯು ವಹಿವಾಟು ನಡೆಸಿದೆ. 2010-11ನೇ ಸಾಲಿನಲ್ಲಿ 7ಕೋಟಿ ರೂ ವಹಿವಾಟು ನಡೆಸುವ ಗುರಿಯನ್ನಿಟ್ಟುಕೊಂಡಿದೆ. ಅಕ್ಟೋಬರ್ 2010ರವರೆಗೆ 2.65 ಕೋಟಿ ರೂ ವಹಿವಾಟು ಮಾಡಲಾಗಿದೆ ಎಂದು ವಿವರಿಸಿದರು.ಬಿಜೆಪಿ ಹಿರಿಯ ಮುಖಂಡ ನಾಗೇಶ್ವರರಾವ್, ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಮರ್ಚಟಹಾಳ, ಮಹಾಲಿಂಗ ರಾಂಪುರ, ಆಂಜನೇಯ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.