ಶುಕ್ರವಾರ, ಜೂಲೈ 3, 2020
28 °C

ರೆಡಿಮೇಡ್ ಅಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆಡಿಮೇಡ್ ಅಡುಗೆ

ಬಿಸಿ, ಬಿಸಿ ಚಪಾತಿ, ಅದರ ಮೇಲೆ ಅಜ್ಜಿ, ಅಮ್ಮ ಕಾಯಿಸಿದ ಘಮ, ಘಮಿಸುವ ಮರಳು ಮರಳು ತುಪ್ಪ... ಮನೆಯಲ್ಲಿ ಕಾಯಿಸಿದ ಶುದ್ಧ ತುಪ್ಪದ ಸವಿಯನ್ನು ದಶಕಗಳಿಂದ ರಾಜ್ಯದ ಜನರಿಗೆ ಉಣಿಸಿದ್ದು `ಜಿಆರ್‌ಬಿ~.ಅದು ಈಗ ತನ್ನ ವ್ಯಾಪಾರ, ವಹಿವಾಟು ವಿಸ್ತರಿಸಿಕೊಳ್ಳಲು ಮುಂದಾಗಿದೆ.ಜನಪ್ರಿಯವಾಗಿರುವ ದಿಢೀರ್ ಆಹಾರ ಉತ್ಪನ್ನಗಳನ್ನು ಹೊರತಂದಿದೆ.

ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮಿಂಚುತ್ತಿದ್ದ `ಜಿಆರ್‌ಬಿ~ಯ ಬ್ರಾಂಡ್ ರಾಯಭಾರಿ ಶ್ವೇತ ಸುಂದರಿ, ಸ್ಯಾಂಡಲ್‌ವುಡ್ ತಾರೆ ಪೂಜಾ ಗಾಂಧಿ ಇವನ್ನು ಇತ್ತೀಚೆಗೆ ಅನಾವರಣಗೊಳಿಸಿದರು.`ಜಿಆರ್‌ಬಿ~ಯ ಹೊಸ ಉತ್ಪನ್ನಗಳ  ಕುರಿತು ವಿವರಿಸಿದ ಆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಬಾಲಸುಬ್ರಹ್ಮಣ್ಯಂ, `ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮನೆ ಅಡುಗೆ ರುಚಿಯನ್ನೇ ನೀಡುವ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುವುದು ನಮ್ಮ ಕನಸಾಗಿದೆ~ ಎಂದರು.`80ರ ದಶಕದಲ್ಲಿ ಶುದ್ಧ ಮನೆಯ ತುಪ್ಪ ನೀಡುವ ಮೂಲಕ ಮಾರುಕಟ್ಟೆ ಪ್ರವೇಶಿಸಿದ್ದ ಜಿಆರ್‌ಬಿ 2005ರಲ್ಲಿ ಐಸ್‌ಕ್ರೀಂ ಪರಿಚಯಿಸಿತ್ತು. ನಂತರ ಗುಲಾಬ್ ಜಾಮೂನ್ ಮಿಕ್ಸ್ ಮತ್ತು ರವಾ ಇಡ್ಲಿ ಮಿಕ್ಸ್ ಬಿಡುಗಡೆ ಮಾಡಿತ್ತು. ಈಗ  ಇನ್‌ಸ್ಟಂಟ್ ಮಿಕ್ಸ್‌ಗಳು, ರೆಡಿ ಟು ಕುಕ್ ಮಿಕ್ಸ್‌ಗಳು, ಸ್ವೀಟ್ ಮಿಕ್ಸ್, ಸಾಂಬಾರ ಪದಾರ್ಥ, ಸ್ಪೈಸ್ ಮಿಕ್ಸ್, ಪೇಸ್ಟ್ ಮತ್ತು ವೈವಿಧ್ಯಮಯ ಉಪ್ಪಿನಕಾಯಿಗಳನ್ನು ಹೊರತಂದಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.