ಗುರುವಾರ , ಜೂನ್ 17, 2021
27 °C

ರೆಸಾರ್ಟ್ ರಾಜಕೀಯ: ಈಶ್ವರಪ್ಪ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕರ ರೆಸಾರ್ಟ್ ಪ್ರಯಾಣವನ್ನು ತಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ತೀಕ್ಷ್ಣವಾಗಿ ಹೇಳಿದರು.ಇದು ಆಶಿಸ್ತು ಅಲ್ಲ; ಪಕ್ಷದ ಸಂಘಟನೆ, ಸರ್ಕಾರವನ್ನು ಬಲಪಡಿಸುವ ಉದ್ದೇಶದಿಂದ ಯಡಿಯೂರಪ್ಪ ರೆಸಾರ್ಟ್ ಸಭೆ ನಡೆಸುತ್ತಿರಬಹುದು ಎಂದು ಭಾನುವಾರ ರಾತ್ರಿ ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು. ಸಭೆ ನಡೆಸಲು ಎಲ್ಲರೂ ಸ್ವತಂತ್ರರಿದ್ದಾರೆ. ಇದನ್ನು ಅಶಿಸ್ತು ಎನ್ನಲಾಗದು ಎಂದು ಸ್ಪಷ್ಟಪಡಿಸಿದರು.ಯಡಿಯೂರಪ್ಪ 48 ಗಂಟೆಯ ಗಡುವು ನೀಡಿದ್ದರಲ್ಲ ಎಂಬ ಪ್ರಶ್ನೆಗೆ, ಯಡಿಯೂರಪ್ಪ ಅವರ ಇಂತಹ ಗಡುವು ಸಾಕಷ್ಟು ನೋಡಿದ್ದೇವೆ. ಕಾಶಿ, ವೈಷ್ಣವಿದೇವಿ, ದೆಹಲಿ ಭೇಟಿ ಇಂತಹ ಹಲವು ಗಡುವುಗಳನ್ನು ಅವರು ನೀಡುತ್ತಲೇ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.ನಾಯಕತ್ವ ಬದಲಾವಣೆ ಇಲ್ಲ

ಶಿವಮೊಗ್ಗ:
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರೇ ಬಜೆಟ್ ಮಂಡಿಸುತ್ತಾರೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪುನರುಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.