ಶನಿವಾರ, ಮೇ 15, 2021
25 °C

ರೆಹಮಾನ್ ಶರೀಫ್ ಕನಸು ಭಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಅವರು ಸ್ಪರ್ಧಿಸಿದ್ದ ಬೂತ್ ಸಮಿತಿಯೇ ರದ್ದಾದ ಹಿನ್ನೆಲೆಯಲ್ಲಿ ಅವರ ಕನಸು ಭಗ್ನಗೊಂಡಂತಾಗಿದೆ.ರೆಹಮಾನ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬೂತ್ ಸಮಿತಿಯೊಂದರಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅದರ ಚುನಾವಣೆ ಮಂಗಳವಾರ ನಡೆದು, 40 ಮತದಾರರ ಪೈಕಿ ಕೇವಲ ಐದು ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

 

ನಿಯಮ ಪ್ರಕಾರ ಕನಿಷ್ಠ ಶೇ 20ರಷ್ಟಾದರೂ ಮತದಾನ ಆಗಬೇಕು. ಅದು ಸಾಧ್ಯವಾಗದ ಕಾರಣ ಆ ಬೂತ್ ಸಮಿತಿಯನ್ನೇ ರದ್ದು ಮಾಡಲಾಗಿದೆ. ಬೂತ್ ಸಮಿತಿಗೆ ಆಯ್ಕೆಯಾದರೆ ಮಾತ್ರ  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯ. ಆದರೆ ರೆಹಮಾನ್ ಅವರು ಮೊದಲ ಹಂತದ ಚುನಾವಣಾ ಪ್ರಕ್ರಿಯೆಯಿಂದಲೇ ನಿರ್ಗಮಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.