ಧರ್ಮಪುರ: ಸಮೀಪದ ಪ್ರಸಿದ್ಧ ಶ್ರೀರೇಣುಕಾ ಪರಮೇಶ್ವರಿ ಜಾತ್ರಾ ಉತ್ಸವದ ಅಂಗವಾಗಿ ಸಿಡಿ ಕಾರ್ಯಕ್ರಮ ಮಂಗಳವಾರ ನೆರವೇರಿತು.

ಪ್ರತಿವರ್ಷ ಮಾರ್ಚ್ನಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವದ ವೇಳೆ ರಥೋತ್ಸವ, ಅಗ್ನಿಕುಂಡ ಮತ್ತು ಸಿಡಿ ಕಾರ್ಯಕ್ರಮಗಳು ನಡೆಯುತ್ತವೆ.

ಅಗ್ನಿಕುಂಡದ ದಿನ ಪೂಜಾರಿ ಅದರಲ್ಲಿನ ಕೆಂಡವನ್ನು ಸೀರೆಯಲ್ಲಿ ಕಟ್ಟಿ ದೇವಿಗೆ ಉಡಿಸುತ್ತಾರೆ. ನಂತರ ಮತ್ತೆ ಜಾತ್ರೆಯ ಸಂದರ್ಭದಲ್ಲಿ ಅದೇ ಕೆಂಡದಿಂದ ಅಗ್ನಿಕುಂಡ ಹೊತ್ತಿಸುತ್ತಾರೆ. ಯಾವುದೇ ಕಾರಣಕ್ಕೂ ಸೀರೆ ಸುಡುವುದಿಲ್ಲ ಮತ್ತು ಸೀರೆಯಲ್ಲಿನ ಕೆಂಡ ಆರುವುದಿಲ್ಲವೆಂಬ ನಂಬಿಕೆ ಮತ್ತು ಪ್ರತೀತಿ ಇಂದಿಗೂ ನಡೆದುಕೊಂಡು ಬಂದಿದೆ.

ಸಿಡಿಯ ದಿನ ಬೆನ್ನಿನ ಚರ್ಮಕ್ಕೆ ಕೊಂಡಿ ಹಾಕಿಸಿಕೊಂಡು ಸಿಡಿ ಮರ ಹೇರುವುದು ಭಕ್ತರ ಹರಕೆಯಾಗಿರುತ್ತದೆ. ಸಾವಿರಾರು ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.