ಸೋಮವಾರ, ಮೇ 23, 2022
26 °C

ರೇಷ್ಮೆ ಉತ್ಪಾದನೆ ಹೆಚ್ಚಳಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ರೇಷ್ಮೆ ಉತ್ಪಾದನೆಯಲ್ಲಿ ಸಾಧಿಸಲು ಹಲವು ಅವಕಾಶಗಳಿವೆ. ಇದಕ್ಕಾಗಿ ಇಲಾಖೆ ಅಧಿಕಾರಿಗಳು, ರೈತರು ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ಬಳಕೆಯಿಂದ ರೇಷ್ಮೆ ಉತ್ಪಾದನೆ ಹೆಚ್ಚಳ ಸಾಧ್ಯವಿದೆ ಎಂದು ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ತಿಳಿಸಿದರು.ತಾಲೂಕಿನ ಕಾಂತರಾಜವೃತ್ತದ ಸಮೀಪ ಗುರುವಾರ ಸರ್ಕಾರಿ ರೇಷ್ಮೆ ಉತ್ಪಾದನೆ ಹಾಗೂ ಮಾರಾಟ ಕೇಂದ್ರವನ್ನು ಉದ್ಘಾಟಿಸಿ, ಮುಳಬಾಗಲು ಪ್ರಗತಿಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕಸವನ್ನು ತ್ವರಿತವಾಗಿ ವಿಲೇವಾರಿಗೊಳಿಸುವುವದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ವಿವಿಧ ಯೋಜನೆಗಳ ಅಡಿಯಲ್ಲಿ ರೈತರಿಗೆ  ಸಲಕರಣೆಗಳನ್ನು ವಿತರಿಸಿದರು.ಮುಖಂಡರಾದ ಜಿ.ರಾಮಲಿಂಗಾರೆಡ್ಡಿ, ಉತ್ತನೂರು ಶ್ರೀನಿವಾಸ್ ಮಾತನಾಡಿದರು.ಜಿಲ್ಲಾ ಉಪನಿರ್ದೇಶಕ ಎಸ್.ತುಪ್ಪದ್, ರೇಷ್ಮೆ ಜಂಟಿ ನಿರ್ದೇಶಕ ಆರ್.ಪ್ರಭಾಕರ್, ಡಾ.ಶಾಂತಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನೀಲಕಂಠೇಗೌಡ, ಕಲ್ಲುಪಲ್ಲಿ ಪ್ರಕಾಶ್, ಸಹಾಯಕ ನಿರ್ದೇಶಕರಾದ ಎಸ್.ಎನ್. ಶ್ರೀನಿವಾಸ್,ವೆಂಕಟೇಶ್, ಡಾ.ಸುಬ್ರಮಣ್ಯಂ,  ಆರ್.ಪ್ರಭಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.