ಶನಿವಾರ, ಮೇ 28, 2022
31 °C

ರೇಷ್ಮೆ ಬೆಳೆದು ಲಾಭ ಪಡೆದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾವಗಲ್: ಕೋಳಗುಂದ ಗ್ರಾಮದ ಬಯಲು ಸೀಮೆಯ ಪ್ರದೇಶದಲ್ಲಿ ರೈತ ಧರ್ಮಪ್ಪ ಎಂಬುವವರು ಸಿಎಸ್ ಆರ್‌ಪಿ ಎಂಬ ಹೊಸ ರೇಷ್ಮೆ ತಳಿ ಬೆಳೆದು ಬಂಪರ್ ಲಾಭ ಪಡೆದು ಕೊಂಡಿದ್ದಾರೆ.ರೇಷ್ಮೆಗೆ ಬಯಲುಸೀಮೆ ಮತ್ತು ಅರೆಮಲೆನಾಡು ಉತ್ತಮ ವಾತಾವರಣ. ಉಷ್ಣಾಂಶ ಮತ್ತು ತೇವಾಂಶ ಪೂರಕವಾಗಿದ್ದು ಶುದ್ಧ ತಳಿಗೂಡು ಬೆಳೆಯಲು ಸೂಕ್ತವಾಗಿದ್ದರಿಂದ ಕೋಳಗುಂದ ಗ್ರಾಮದ ಧರ್ಮಪ್ಪ ಅಧಿಕ ಲಾಭಗಳಿಸಿದ್ದಾರೆ.ಇವರು 2200ವಿ1 ವಿಕ್ಟೋರಿಯಾ ಹೊಸ ತಳಿಯ ಹಿಪ್ಪುನೇರಳೆ ಗಿಡವನ್ನು 2009ರಲ್ಲಿ ನಾಟಿ ಮಾಡಿದ್ದರು.ಜಮೀನನ್ನು ಎರಡು ಭಾಗ ಮಾಡಿಕೊಂಡಿದ್ದು ರೇಷ್ಮೆ ಶುದ್ಧ ತಳಿಗೂಡನ್ನು ಪ್ರತಿ ಬ್ಯಾಚ್‌ಗೆ 75 ಮೊಟ್ಟೆಯಿಂದ ಚಾಕಿಕಟ್ಟಿ 44 ಕೆಜಿ ರೇಷ್ಮೆ ಗೂಡನ್ನು ಬೆಳೆದು 1ಕೆ.ಜಿ.ಗೆ ರೂ.1,050 ನಂತೆ ಮಾರಾಟ ಮಾಡಿದ್ದಾರೆ. ಇದರಿಂದ ರೂ.46, 200 ಲಾಭ ಗಳಿಸಿದ್ದು, ಮಾದರಿ ರೇಷ್ಮೆ ಬೆಳೆಗಾರ ಆಗಿದ್ದಾರೆ.ಜಾವಗಲ್ ಹೋಬಳಿಯ ರೇಷ್ಮೆ ನಿರೀಕ್ಷಕ ಕಲ್ಯಾಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಏಕ ಕಾಂತ ಪದ್ಧತಿ, ಸೋಂಕು ನಿವಾರಣೆ, ಕೂಲಿ ಕಾರ್ಮಿಕ ರಹಿತ ರೆಂಬೆ ಪದ್ದತಿ ಕೆಲಸದಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಪಡೆಯ ಬಹುದೆಂದು ತೋರಿಸಿ ಕೊಟ್ಟಿದ್ದಾರೆ.ನೇಕಾರ ದೇವಾಂಗ ನಮೂದಿಸಲು ಸೂಚನೆ

ಪಟ್ಟಣದಲ್ಲಿ ಆರಂಭಿಸಿರುವ ಜನಗಣತಿಯಲ್ಲಿ ದೇವಾಂಗ ಸಮಾಜದವರು ನೇಕಾರ ದೇವಾಂಗ ಎಂದು ಬರೆಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಜಾ.ತಿ. ಸತ್ಯನಾರಾಯಣ ತಿಳಿಸಿದ್ದಾರೆ.ವಾರ್ಷಿಕೋತ್ಸವ ಇಂದು

ಪಟ್ಟಣದ ಕನ್ನಡ ಮಾತಾ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಾರ್ಷಿಕೋತ್ಸವ ಸಮಾರಂಭ 11ರಂದು ಸಂಜೆ 5ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಮುಖ್ಯಶಿಕ್ಷಕ ನಂಜುಂಡಪ್ಪ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.