ಜಾಗತಿಕ ಮಟ್ಟದಲ್ಲಿ ರೇಷ್ಮೆಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಗುಣಮಟ್ಟದ ರೇಷ್ಮೆ ಉತ್ಪಾದನೆ ಮೂಲಕ ಭಾರತ ಜಗತ್ತಿನ ಒಂದು ಪ್ರಮುಖ ರೇಷ್ಮೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ಸಾಕಷ್ಟು ಅವಕಾಶಗಳಿವೆ.

ರೇಷ್ಮೆ ಉದ್ದಿಮೆಗೆ ಸಂಬಂಧಿಸಿದ ಉತ್ತಮ ಹಿಪ್ಪುನೇರಳೆ ತಳಿ, ಮೊಟ್ಟೆ ಉತ್ಪಾದನೆ, ಹುಳು ಸಾಕಾಣಿಕೆ, ತೋಟ-ಮನೆಗಳ ನಿರ್ವಹಣೆ, ರೋಗಗಳ ನಿಯಂತ್ರಣ-ನಿವಾರಣೆ, ರೇಷ್ಮೆ ಸಂಸ್ಕರಣೆಯ ಹಾಗೂ ನೇಯ್ಗೆಯ ಕ್ಷೇತ್ರಗಳಲ್ಲಿ ವೈಜ್ಞಾನಿಕವಾಗಿ ಹೊಸ ಹೊಸ ಆವಿಷ್ಕಾರ ಹಾಗೂ ಸಂಶೋಧನೆ ನಡೆಸುವ ಮೂಲಕ ರೇಷ್ಮೆ ಉದ್ದಿಮೆಯು ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಗಮನಹರಿಸಬೇಕು.

ರೇಷ್ಮೆ ಉದ್ದಿಮೆಯಲ್ಲಿ ರೈತರು, ಕೂಲಿಕಾರರು, ಮೊಟ್ಟೆ ಉತ್ಪಾದಕರು, ರೀಲರುಗಳು, ನೇಕಾರರು, ಚಾಕಿ ಕೇಂದ್ರಗಳ ಮಾಲೀಕರು, ವ್ಯಾಪಾರಿಗಳು ಹೀಗೆ ವಿವಿಧ ಜನರನ್ನು ಕಾಣುತ್ತೇವೆ.

ಹೀಗಾಗಿ ಇದೊಂದು ಬೃಹತ್ ಉದ್ದಿಮೆಯಾಗಿದೆ. ಇಲ್ಲಿ ಮಾನವ ಉದ್ಯೋಗಗಳ ಸೃಷ್ಟಿಗೆ ಅವಕಾಶವಿದೆ. ಇಂತಹ ಸ್ಥಿತಿಯಲ್ಲಿ ದೇಶದಲ್ಲಿ ರೇಷ್ಮೆ ಉದ್ದಿಮೆ ಮಾನವ ಸಂಪನ್ಮೂಲದ ಸದ್ಬಳಕೆ ಹಾಗೂ ನಿರುದ್ಯೋಗ ನಿವಾರಣೆಯ ದಿಕ್ಕಿನಲ್ಲಿ ಹೊಸ ಸಂಶೋಧನೆಗಳು ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.