ಮಂಗಳವಾರ, ಮೇ 11, 2021
19 °C

ರೈಡರ್ಸ್-ರೆಡ್ ಬ್ಯಾಕ್ಸ್ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಎರಡೂ ತಂಡಗಳು ತಲಾ ಒಂದೊಂದು ಪಂದ್ಯಗಳನ್ನಾಡಿವೆ. ಆದರೆ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆಸ್ಟ್ರೇಲಿಯಾ ರೆಡ್ ಬ್ಯಾಕ್ಸ್ ತಂಡಗಳು ಮಂಗಳವಾರ ಇಲ್ಲಿ ಪೈಪೋಟಿ ನಡೆಸಲಿವೆ.ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್‌ಗಳ ಖಾತೆ ತೆರೆಯಬೇಕು ಎನ್ನುವುದು ಉಭಯ ತಂಡಗಳ ಉದ್ದೇಶ.ರೆಡ್ ಬ್ಯಾಕ್ಸ್ ತಂಡ ಭಾನುವಾರ ಮೊದಲ ಪಂದ್ಯದಲ್ಲಿ ವಾರಿಯರ್ಸ್ ಎದುರು 50 ರನ್ ಅಂತರದ ಸೋಲು ಕಂಡಿದೆ. ನೈಟ್ ರೈಡರ್ಸ್ ಇಂಗ್ಲೆಂಡ್‌ನ ಕೌಂಟಿ ತಂಡವಾದ ಸಾಮರ್ಸೆಟ್ ಎದುರು ಮುಖಭಂಗ ಅನುಭವಿಸಿದೆ. ಆದ್ದರಿಂದ ಈ ಪಂದ್ಯದಲ್ಲಿಯೇ ಗೆಲುವಿನ ಖಾತೆ ತೆರೆಯಬೇಕು ಎನ್ನುವುದು ಉಭಯ ತಂಡಗಳ ನಾಯಕರ ಅಪೇಕ್ಷೆ.ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ತಂಡಕ್ಕೆ ವಾಪಸಾಗಿದ್ದಾರೆ. ರೆಡ್ ಬ್ಯಾಕ್ಸ್ ತಂಡ ಮೊದಲ ಪಂದ್ಯದಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಈ ತಂಡದ ಬೌಲಿಂಗ್ ಶಕ್ತಿ ಎನಿಸಿರುವ ಡೇನಿಯಲ್ ಹ್ಯಾರಿಸ್ ಹಾಗೂ ಡೇನಿಯಲ್ ಕ್ರಿಸ್ಟಿಯನ್ ವಾರಿಯರ್ಸ್ ಎದುರಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಮಾತ್ರ ಸಮಾಧಾನ.

ಪಂದ್ಯ ಆರಂಭ: ರಾತ್ರಿ 8.00ಕ್ಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.