ಕೊಳ್ಳೇಗಾಲ: `ಸುವರ್ಣ ಭೂಮಿ~ ಯೋಜನೆಯಡಿ ಜಿಲ್ಲೆಯ 1456 ರೈತರಿಗೆ ಜೈವಿಕ ಇಂಧನ ಕಾರ್ಯಕ್ರಮ ದ ಸೌಲಭ್ಯ ದೊರೆಯಲಿದೆ~ ಎಂದು ಮೈರಾಡ ಯೋಜನಾಧಿಕಾರಿ ರಾಜಾಚಾರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಾಮರ್ಥ್ಯ ಸೌಧದಲ್ಲಿ ಗ್ರಾಮ ಪಂಚಾ ಯಿತಿ ಚುನಾಯಿತ ಪ್ರತಿನಿಧಿಗಳು, ಅನು ಷ್ಠಾನಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹಾಗೂ ಮೈರಾಡ, ರೋಟರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಜೈವಿಕ ಇಂಧನ ಕುರಿತ ಉಪಗ್ರಹ ಆಧಾರಿತ ತರಬೇತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ರೈತರ ಕೃಷಿ ಉತ್ಪನ್ನ ಹೆಚ್ಚಿಸಲು ಹಾಗೂ ಜೀವನ ಮಟ್ಟ ಸುಧಾರಣೆಗಾಗಿ ಸುವರ್ಣ ಭೂಮಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಈ ಕಾರ್ಯಕ್ರಮದಡಿ 5 ಎಕರೆಗಿಂತಲೂ ಕಡಿಮೆ ಖುಷ್ಕಿ ಜಮೀನು ಹೊಂದಿದ ರೈತ ಕುಟುಂಬ ಗಳಿಗೆ ತಲಾ 10,000 ರೂ ಸಹಾಯ ಧನವನ್ನು ಜೈವಿಕ ಇಂಧನ ಕೃಷಿಯಲ್ಲಿ ತೊಡಗಲಿಚ್ಚಿಸುವ ರೈತ ಕುಟುಂಬಗಳಿಗೆ ಪಾವತಿಸಲಾಗುವುದು.

ರೈತರು ಜೈವಿಕ ಇಂಧನ ಸಸ್ಯಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ, ಸುರಹೊನ್ನೆ ಇತ್ಯಾದಿಗಳನ್ನು ತಮ್ಮ ಹೊಲದ ಬದುಗಳಲ್ಲಿ, ಬಂಜರು ಭೂಮಿ, ಕೆರೆಕಟ್ಟೆಗಳ ಬದುಗಳಲ್ಲಿ ಬೆಳೆಯಬಹುದು ಎಂದು ವಿವರಿಸಿದರು.
ನಿಗದಿತ ಸುವರ್ಣ ಭೂಮಿ ಅರ್ಜಿ ಯನ್ನು ಜೈವಿಕ ಇಂಧನ ಕಾರ್ಯಕ್ರಮ ಚಟುವಟಿಕೆಗೆ ಭರ್ತಿ ಮಾಡಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಹಸಿರು ಹೊನ್ನು, ಬರಡು ಬಂಗಾರ, ಸುವರ್ಣ ಭೂಮಿ ಯೋಜನೆ ಕಾರ್ಯ ಕ್ರಮಗಳ ಬಗ್ಗೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮೊನ್ನಪ್ಪ, ಜೈವಿಕ ಇಂಧನ ವಿವಿಧ ಬೆಳೆಗಳು ಹಾಗೂ ಉಪಯೋಗಗಳ ಬಗ್ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲ ಯದ ಡಾ. ಬಾಲಕೃಷ್ಣೇಗೌಡ, ಸುವರ್ಣ ಭೂಮಿ ಯೋಜನೆ ಅನುಷ್ಠಾನದ ಬಗ್ಗೆ ತಾಂತ್ರಿಕ ಅಧಿಕಾರಿ ಬಸವರಾಜ್, ಸಮುದಾಯ ಪಾತ್ರದ ಬಗ್ಗೆ ಬಿಜಾಪುರ ಐ.ಆರ್.ಡಿ ನಿರ್ದೇಶಕ ಡಾ.ಬಾಬು ಜಿ. ಸಜ್ಜನ ಉಪಗ್ರಹದ ಮೂಲಕ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಲ್ಲಯ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಸ್ವಾಮಿ, ರೋಟರಿ ವೃತ್ತಿ ಸೇವೆ ನಿರ್ದೇಶಕಿ ಸ್ಟೆಲ್ಲಾಕುಮಾರಿ, ಮೈರಾಡ ಅಬ್ದುಲ್ ಗಫಾರ್, ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.