ರೈತರಿಗೆ ಸಮರ್ಪಕ ಸಾಲ ವಿತರಣೆ

ಶುಕ್ರವಾರ, ಮೇ 24, 2019
28 °C

ರೈತರಿಗೆ ಸಮರ್ಪಕ ಸಾಲ ವಿತರಣೆ

Published:
Updated:

ಹೊನ್ನಾಳಿ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಉತ್ತಮವಾಗಿ ವ್ಯವಹಾರ ನಡೆಸಿದೆ. ನಬಾರ್ಡ್‌ನ ಎಲ್ಲಾ ಸೂಚನೆಗಳನ್ನು ಪಾಲಿಸಿ ಸಹಾಯಧನ ಪಡೆದು ರೈತರಿಗೆ ಸಮರ್ಪಕವಾಗಿ ಸಾಲ ವಿತರಿಸಿ, ಎಲ್ಲರ ಪ್ರೀತಿಗೆ ಪಾತ್ರವಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಬಸವನಗೌಡ ಹೇಳಿದರು.ಸೋಮವಾರ ಪಟ್ಟಣದಲ್ಲಿ ನಡೆದ ಪಿಎಲ್‌ಡಿ ಬ್ಯಾಂಕ್‌ನ 2010-11ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದ 177 ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ 2 ಸೂಪರ್‌ಸೀಡ್ ಆಗಿವೆ. 8 ಬ್ಯಾಂಕ್‌ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಉಳಿದ 167 ಬ್ಯಾಂಕ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಆ ಪೈಕಿ ಹೊನ್ನಾಳಿಯ ಪಿಎಲ್‌ಡಿ ಬ್ಯಾಂಕ್ ಕೂಡಾ ಒಂದಾಗಿದೆ.

ಸಾಲ ವಸೂಲಾತಿಗಾಗಿ ಬ್ಯಾಂಕ್ ಕೆಲ ಕಠಿಣ ಕ್ರಮ ಕೈಗೊಂಡಿದೆ. ಇದರಿಂದ ರೈತರು ಬೇಸರ ಮಾಡಿಕೊಳ್ಳಬಾರದು. ಬ್ಯಾಂಕ್‌ನ ಅಭಿವೃದ್ಧಿಗೆ ಮತ್ತು ನಬಾರ್ಡ್‌ನಿಂದ ಹೆಚ್ಚಿನ ಸಹಾಯಧನ ಪಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.ಇನ್ನೂ ಸಾಲ ಉಳಿಸಿಕೊಂಡಿರುವ ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕ್‌ನ ಏಳಿಗೆಗೆ ಕಾರಣೀಭೂತರಾಗಬೇಕು ಎಂದು ಅವರು ತಿಳಿಸಿದರು.ಉಪಾಧ್ಯಕ್ಷೆ ಸುಭದ್ರಮ್ಮ, ಜಿ. ಶಂಕರಮೂರ್ತಿ, ಎಚ್.ಎಂ. ಗಂಗಾಧರಯ್ಯ, ಕೆ.ವಿ. ನಾಗರಾಜ್, ಕೆ. ಕರಿಬಸಪ್ಪ, ಬಿ.ಜಿ. ಶಿವಕುಮಾರ್, ಕೆ.ಇ. ನಾಗರಾಜ್ ಮಾದೇನಹಳ್ಳಿ, ಟಿ. ನಾಗರಾಜಪ್ಪ, ಎಚ್.ಪಿ. ವೇದಮೂರ್ತಿ, ಕೆ. ಶಿವಮೂರ್ತಿ, ಜಿ. ಈಶ್ವರಪ್ಪ, ಕೆ.ಎಸ್. ಸಿದ್ದಬಸಪ್ಪ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry