ಚಿಕ್ಕನಾಯಕನಹಳ್ಳಿ: ದೇಶದ ರೈತರಿಗೆ ಇಂದಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ. ಸರ್ಕಾರ, ಅಧಿಕಾರಿ ವರ್ಗ, ರಾಜಕಾರಣಿಗಳು ರೈತರನ್ನು ಜೀತದ ಆಳುಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೋಮವಾರ ‘ಸಾಲಗಾರರು ನಾವಲ್ಲ, ಸಾಲ ನಮ್ಮದಲ್ಲ’ ಎಂಬ ವಾಕ್ಯದೊಂದಿಗೆ ನಡೆದ ರೈತರ ಬೃಹತ್ ಚಿಂತನಾ ಸಮಾವೇಶ ಉದ್ಘಾಟಿಸಿ ಮಾತನಾಡಿ, 1982ರಲ್ಲೇ ಹೈಕೋರ್ಟ್ ರೈತರ ಆಸ್ತಿ ಜಫ್ತಿ ನಿಷೇಧಿಸಿದೆ.

ಹಣಕಾಸು ಸಂಸ್ಥೆಗಳು ಸಾಲ ವಸೂಲಿ ಹೆಸರಲ್ಲಿ ದೌರ್ಜನ್ಯ ಎಸಗಿದರೆ ಕಾನೂನು ರಕ್ಷಣೆ ಪಡೆಯಿರಿ ಎಂದು ರೈತರಿಗೆ ಸಲಹೆ ನೀಡಿದರು.

₨1.27 ಸಾವಿರ ಲಕ್ಷ ಬಜೆಟ್ನಲ್ಲಿ ಕೃಷಿಗೆ ಮೀಸಲಿಟ್ಟಿರುವುದು ₨5397 ಕೋಟಿ. ಅದರಲ್ಲೂ ಶೇ 65 ಭಾಗ ಆಡಳಿತಾತ್ಮಕ ನಿರ್ವಹಣೆಗೆ ಮೀಸಲು. ಉಳಿದ ಶೇ 35ರಷ್ಟು ಮಾತ್ರ ಅಭಿವೃದ್ಧಿ ಯೋಜನೆಗೆ. ಇದುವರೆಗೂ ನಮ್ಮನ್ನು ಆಳಿರುವ ಸರ್ಕಾರಗಳು ಕೃಷಿ ಉತ್ಪಾದಕತೆಗೆ ಉತ್ತೇಜನ ನೀಡಿವೇ ಹೊರತು, ರೈತರ ಬದುಕು ಉತ್ತಮಗೊಳಿಸಲು ಅಲ್ಲ. ರೈತರ ಹೆಸರಲ್ಲಿ ಘೋಷಿಸುವ ಸಬ್ಸಿಡಿ ಯೋಜನೆಗಳು ಬೀಜ, ಗೊಬ್ಬರ, ಔಷಧಿ ಕಂಪೆನಿ ಉದ್ಧಾರ ಮಾಡುವುದಕ್ಕೆ ಹೊರತು ರೈತರ ಉದ್ಧಾರಕ್ಕಲ್ಲ ಎಂದರು.

ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ಕೈಗಾರಿಕೆಗಳು ಬಾಕಿ ಉಳಿಸಿಕೊಂಡಿದ್ದ ₨ 85 ಸಾವಿರ ಕೋಟಿಯನ್ನು ಮನ್ನಾ ಮಾಡಿರುವ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡುವುದು ಭಾರವೇ ಎಂದು ಪ್ರಶ್ನಿಸಿ, ಸರ್ಕಾರದ ದ್ವಂದ್ವ ನೀತಿ ವಿರುದ್ಧ ಹೋರಾಡಿ ಎಂದರು.

ಸಮಾವೇಶಕ್ಕೆ ಮುನ್ನ ಕಂಬಳಿ ಸೊಸೈಟಿಯಿಂದ ಸಮಾರಂಭದ ಸ್ಥಳ ಕನ್ನಡ ಸಂಘದ ವೇದಿಕೆಗೆ ರೈತ ಮುಖಂಡರು ಮೆರವಣಿಗೆಯಲ್ಲಿ ಬಂದರು. ನೂರಾರು ಟ್ರ್ಯಾಕ್ಟರ್ಗಳ ಸಮೇತ ತಾಲ್ಲೂಕಿನ ರೈತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರೈತ ಮುಖಂಡರಾದ ಶಿವಬಸವಯ್ಯ, ಆ.ನಾ.ಗಂಗಾಧರ್, ಮುರುಳಿ, ಮಂಜುನಾಥ್ ನೇತೃತ್ವದಲ್ಲಿ ನೂರಾರು ರೈತರು ರೈತಸಂಘಕ್ಕೆ ಸೇರ್ಪಡೆಯಾದರು.

ತಿಮ್ಲಾಪುರ ಶಂಕರಣ್ಣ, ಎಸ್.ದೇವರಾಜ್, ಧನಂಜಯಾರಾಧ್ಯ, ದಬ್ಬೇಕಟ್ಟೆ ಜಗದೀಶ್, ಕೆ.ಪಿ.ಮಲ್ಲೇಶ್, ಅಣೆಕಟ್ಟೆ ವಿಶ್ವನಾಥ್, ಜೆ.ಸಿ.ಪುರ ಲಿಂಗರಾಜು, ಯೋಗೀಶ್ವರ ಸ್ವಾಮಿ, ಲೋಕೇಶ್, ಗಂಗಾಧರಯ್ಯ, ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.