ಲಂಡನ್ (ಪಿಟಿಐ): ಬ್ರಿಟನ್ನ ದರೋಡೆಕೋರ, 1963ರಲ್ಲಿ ನಡೆದಿದ್ದ ‘ಬೃಹತ್ ರೈಲು ದರೋಡೆ’ಯಲ್ಲಿ ಭಾಗಿಯಾಗಿ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿದ್ದ ರೋನಿ ಬಿಗ್ಸ್ (84) ಬುಧವಾರ ನಿಧನ ಹೊಂದಿದ್ದಾನೆ.

1963ರ ಆಗಸ್ಟ್ 8ರಂದು ಗ್ಲಾಸ್ಗೊದಿಂದ ಲಂಡನ್ಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿಗೆ ನುಗ್ಗಿ ದರೋಡೆ ನಡೆಸಿದ್ದ ತಂಡದಲ್ಲಿ ಬಿಗ್ಸ್ ಕೂಡ ಇದ್ದ.

ಆ ಸಂದರ್ಭದಲ್ಲಿ ದರೋಡೆಕೋರರು 26 ಲಕ್ಷ ಪೌಂಡ್ (ಈಗಿನ 4 ಕೋಟಿ ಪೌಂಡ್, ಅಂದರೆ ₨404 ಕೋಟಿ) ನಗದನ್ನು ದೋಚಿದ್ದರು. ಬಕ್ಕಿಂಗ್ಹ್ಯಾಮ್ಶೈರ್ ಸಮೀಪ ನಡೆದಿದ್ದ ಈ ದುಷ್ಕೃತ್ಯದ ಸಂದರ್ಭದಲ್ಲಿ ಬಿಗ್ಸ್ ಸೇರಿದಂತೆ ತಂಡದ ಇತರ ಸದಸ್ಯರು ಹೆಲ್ಮೆಟ್ ಹಾಗೂ ಮುಸುಕು ಧರಿಸಿದ್ದರು.

ತಕ್ಷಣ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 11 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ರೋನಿ ಬಿಗ್ಸ್ಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, 1965ರಲ್ಲಿ ಆತ ವಂಡ್ಸ್ವರ್ತ್ ಜೈಲಿನಿಂದ ತಪ್ಪಿಸಿಕೊಂಡಿದ್ದ.

ಆರಂಭದಲ್ಲಿ ಬಿಗ್ಸ್ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ಪ್ಯಾರಿಸ್ಗೆ ಪಲಾಯನ ಮಾಡಿದ್ದ. ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಆಸ್ಟ್ರೇಲಿಯಾಕ್ಕೆ ಹೋಗಿದ್ದ.
ಆದರೆ, ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಆತನನ್ನು ಪತ್ತೆಹಚ್ಚುತ್ತಿ ದ್ದಂತೆ ಬ್ರೆಜಿಲ್ನ ರಿಯೊ ಡಿ ಜನೈರೊಗೆ ಪರಾರಿಯಾ ಗಿದ್ದ. ಅಲ್ಲಿಯ ಮಹಿಳೆಯನ್ನು ವರಿಸಿ ಪುತ್ರನನ್ನೂ ಪಡೆದಿದ್ದ. ಈ ಕಾರಣದಿಂದಾಗಿ ಬ್ರಿಟನ್ಗೆ ಗಡೀ ಪಾರುಗೊಳ್ಳುವುದರಿಂದ ವಿನಾಯ್ತಿ ಪಡೆದಿದ್ದ.

2000ದಲ್ಲಿ ಸಾರ್ವಜನಿಕವಾಗಿ ಮಾತನಾಡಿದ್ದ ಬಿಗ್ಸ್, ದರೋಡೆಯಲ್ಲಿ ದೋಚಿದ ಹಣದಲ್ಲಿ ತನ್ನ ಪಾಲಿಗೆ ಬಂದಿದ್ದ 1.47 ಲಕ್ಷ ಪೌಂಡ್ ಮೂರು ವರ್ಷಗಳಲ್ಲಿ ಖಾಲಿಯಾಗಿತ್ತು ಎಂದು ಹೇಳಿದ್ದ.

2001ರಲ್ಲಿ ಚಿಕಿತ್ಸೆಗಾಗಿ ಬ್ರಿಟನ್ಗೆ ಹಿಂದಿರುಗಿದ್ದಾಗ ಬಿಗ್ಸ್ನನ್ನು ಬಂಧಿಸಿ, ಬಿಗಿ ಭದ್ರತೆಯ ಬೆಲ್ಮಾರ್ಶ್ ಜೈಲಿಗೆ ಕಳುಹಿಸಲಾಗಿತ್ತು.

ಅನಾರೋಗ್ಯದ ಕಾರಣದಿಂದ ಅನುಕಂಪದ ಆಧಾರದಲ್ಲಿ 2009ರಲ್ಲಿ ಬಿಗ್ಸ್ ಜೈಲಿನಿಂದ ಬಿಡುಗಡೆಗೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.