ರೈಲು ಮಾರ್ಗ ಶೀಘ್ರ ಆರಂಭವಾಗಲಿ
ಬೀದರ್-ಗುಲ್ಬರ್ಗ ರೈಲ್ವೆ ಮಾರ್ಗ ರೈಲ್ವೆಯ ಎರಡು ವಲಯಗಳಲ್ಲಿ ಹಂಚಿ ಹೋಗಿದೆ. ಬೀದರ್ನಿಂದ ಹುಮನಾಬಾದ್ ತಾಲೂಕಿನ ವ್ಯಾಪ್ತಿಯ ಮಾರ್ಗ ಸಿಕಂದರಬಾದ್ನ ದಕ್ಷಿಣ ಮಧ್ಯ ರೈಲ್ವೆ ಅಧೀನಕ್ಕೆ ಒಳಪಟ್ಟಿದೆ. ಅಲ್ಲಿಂದ ಮುಂದೆ ಗುಲ್ಬರ್ಗವರೆಗಿನ ಮಾರ್ಗ ಮುಂಬೈನಲ್ಲಿರುವ ಕೇಂದ್ರವಲಯಕ್ಕೆ ಸೇರಿದೆ.
ಕಳೆದ ಮಾರ್ಚ್ 28ರಂದು ಈ ಭಾಗದಲ್ಲಿ ನೂತನವಾಗಿ ನಿರ್ಮಿಸಿದ ಖಾನಾಪೂರ- ಹುಮ್ನಾಬಾದ್ ನಡುವಣ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಲೋಕೊ ರೈಲ್ವೆ ಎಂಜಿನ್ ಯಶಸ್ವಿಯಾಗಿ ತನ್ನ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದೆ. ಇದು ಹೆಮ್ಮೆ ತರುವ ಸಂಗತಿ.
ಆದರೆ, ಗುಲ್ಬರ್ಗ ಜಿಲ್ಲೆಯ ಕಥೆಯೇ ಬೇರೆ. ಇಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲವಂತೆ. ಒಂದೆಡೆ ರೈಲು ಎಂಜಿನ್ ಓಡಿದ್ದರೆ, ಇನ್ನೊಂದೆಡೆ ಬಹಳ ನಿರಾಶಾದಾಯಕ ಪ್ರಗತಿ. ಗುಲ್ಬರ್ಗ-ಹುಮ್ನಾಬಾದ್ ನಡುವಿನ 53 ಕಿ.ಮೀ ಕಾಮಗಾರಿ 2014ರಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ. ಇನ್ನಾದರೂ, ಯಾವ ಅಡೆ ತಡೆ ಇಲ್ಲದೆ ಈ ಮಾರ್ಗ ಪೂರ್ಣಗೊಳಿಸಲು ಸರ್ಕಾರ ಗಮನ ಹರಿಸಬೇಕು. ಇದರಿಂದ ದೆಹಲಿ ಬೆಂಗಳೂರು ಮಧ್ಯೆ 350 ಕಿಲೋಮೀಟರ್ ಅಂತರ ಕಡಿಮೆಯಾಗಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.