ಮಂಗಳವಾರ, ಜೂನ್ 22, 2021
29 °C

ರೋಟರಿಯಿಂದ ಹಿರಿಯ ಜೀವಗಳ ಆರೋಗ್ಯ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ಯೋಗಕ್ಷೇಮ ನೊಡಿಕೊಳ್ಳುವವರು ಯಾರೂ ಇಲ್ಲ ಎಂದು ಕೊರಗುವ ಹಿರಿಯ ನಾಗರಿಕರ ಪಾಲಿಗೆ ಈ ಮಾತು ಸುಳ್ಳಾಗಿತ್ತು. ಅವರ ಯೋಗಕ್ಷೇಮಕ್ಕಾಗಿ ಅಲ್ಲಿ ಸುಮಾರು 22 ಮಳಿಗೆಗಳಲ್ಲಿ ವೈದ್ಯರು, ಸಲಹಾಗಾರರು ಹಾಗೂ ಸ್ವಯಂ ಸೇವಕರು ನಗು ಮೊಗದಿಂದ ಕಾದಿದ್ದರು.ಹಿರಿಯ ಜೀವಗಳ ಆರೋಗ್ಯ ತಪಾಸಣೆ, ಆಪ್ತ ಸಲಹೆ ಹಾಗೂ ಇನ್ನಿತರ ಸೇವೆಗಳಿಗೆ ತಮ್ಮ ಸಮಯವನ್ನು ಮುಡಿಪಾಗಿಟ್ಟಿದ್ದರು.ಬೆಂಗಳೂರು ಕಂಟೋನ್ಮೆಂಟ್ ರೋಟರಿ ಕ್ಲಬ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಯೋಗಕ್ಷೇಮ~ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮತ್ತು ಜೀವನ ನಿರ್ವಹಣಾ ಶಿಬಿರದಲ್ಲಿ ಕಂಡು ಬಂದ ನೋಟ ಇದು.ಶಿಬಿರದಲ್ಲಿ ನಗರದ ಮಣಿಪಾಲ್ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು ಮಧುಮೇಹ ಆಸ್ಪತ್ರೆ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಗಳ ವೈದ್ಯರು ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಿದರು. ಮೊಬಿಲಿಟಿ ಇಂಡಿಯಾ, ಚಂದ್ರಶೇಖರ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಹೆಲ್ಪಿಂಗ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳ ಸಲಹಾಗಾರರು ಇಳಿಗಾಲದ ಜೀವನ ನಿರ್ವಹಣೆಯ ಬಗ್ಗೆ ಸಲಹೆಗಳನ್ನು ನೀಡಿದರು.`ಜೀವನದ ಸಂಧ್ಯಾಕಾಲದಲ್ಲಿ ಇಂತಹ ಕಾರ್ಯಕ್ರಮಗಳು ಹಿರಿಯ ನಾಗರಿಕರಿಗೆ ಹೆಚ್ಚು ಅನುಕೂಲಕರವಾಗಿರುತ್ತವೆ.ಅ ನಿವೃತ್ತಿ ಜೀವನದಲ್ಲಿ ಉಂಟಾಗುವ ಬೇಸರ, ಜಿಗುಪ್ಸೆಗಳ ಬಗ್ಗೆ ಕೆಲವು ಸಂಸ್ಥೆಗಳ ಸಲಹೆಗಾರರು ಆಪ್ತ ಸಮಾಲೋಚನೆಯ ಮೂಲಕ ನನ್ನಲ್ಲಿ ಜೀವನ ಪ್ರೀತಿ ಹುಟ್ಟುವಂತೆ ಮಾಡಿದ್ದಾರೆ. ಆರೋಗ್ಯ ತಪಾಸಣಾ ಶಿಬಿರಗಳಿಂದ ಹಲವು ಹಿರಿಯ ನಾಗರಿಕರಿಗೆ ಪ್ರಯೋಜನವಾಗಿದೆ~ ಎಂದವರು ಶಿಬಿರದಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಗರಿಕರಾದ ರಾಮೇಶ್ವರ್ ಅವರು.`ಇಳಿ ವಯಸ್ಸಿನ ಮಾನಸಿಕ ಸಮಸ್ಯೆಗಳಿಗೆ ಶಿಬಿರದಲ್ಲಿ ಸಮಾಲೋಚನೆ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ. ಇದರಿಂದ ಹಿರಿಯ ನಾಗರಿಕರಲ್ಲಿ ಸಹಜವಾಗಿ ಹುಟ್ಟುವ ಖಿನ್ನತೆ ದೂರವಾಗುತ್ತದೆ. ಜೀವನದಲ್ಲಿ ಆಸಕ್ತಿ ಹುಟ್ಟಿ ಜೀವನೋತ್ಸಾಹ ಹೆಚ್ಚಾಗುತ್ತದೆ. ಇದೊಂದು ಉತ್ತಮ ಶಿಬಿರ~ ಎಂದವರು ಕಾಕ್ಸ್‌ಟೌನ್‌ನ ಸರೋಜಾ ಬಾಯಿ ಅವರು.`ಇಷ್ಟು ದಿನಗಳಲ್ಲಿ ಕೇವಲ ರೋಟರಿ ಹಿರಿಯ ನಾಗರಿಕರ ಕ್ಲಬ್ ಮಾತ್ರ ಇಂತಹ ಕಾರ್ಯಗಳನ್ನು ಮಾಡುತ್ತಿತ್ತು. ಈ ಬಾರಿ `ಯೋಗಕ್ಷೇಮ~ ಹೆಸರಿನ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರಲ್ಲಿ ಸುಮಾರು 500 ಜನ ಹಿರಿಯ ನಾಗರಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಇನ್ನು ಮುಂದೆ ವರ್ಷದಲ್ಲಿ ಮೂರ‌್ನಾಲ್ಕು ಬಾರಿ `ಯೋಗಕ್ಷೇಮ~ ಶಿಬಿರವನ್ನು ವಿವಿಧ ಕಡೆಗಳಲ್ಲಿ ಆಯೋಜಿಸಲು ಚಿಂತನೆ ನಡೆಸಿದ್ದೇವೆ~ ಎಂದು ರೋಟರಿ ಸಂಸ್ಥೆಯ ಅರವಿಂದ ಗೋಖಲೆ ತಿಳಿಸಿದರು.ನಗರದ ಫ್ರೇಜರ್ ಟೌನ್‌ನ ಕೋಲ್ಸ್ ಪಾರ್ಕ್ ಬಳಿಯ ರೋಟರಿ ಹೌಸ್ ಆಫ್ ಲರ್ನಿಂಗ್‌ನಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಶಿಬಿರದಲ್ಲಿ ನಗರದ ಹಲವು ಹಿರಿಯ ನಾಗರಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.