ಸೋಮವಾರ, ಏಪ್ರಿಲ್ 19, 2021
28 °C

ರ‌್ಯಾಂಪ್ ಮೇಲೆ ವಸ್ತ್ರವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರ‌್ಯಾಂಪ್ ಮೇಲೆ ವಸ್ತ್ರವೈಭವ

 

ರೂಪಂ ಸಿಲ್ಕ್ಸ್‌ನಲ್ಲಿ ಸಂಜೆ ರಂಗೇರಿದಂತಿತ್ತು. ಸಂಗೀತದ ನಿನಾದಕ್ಕೂ ಮೀರಿದ ಹೊಸ ಬಟ್ಟೆಗಳ ಸರಭರ ಸರಭರ ಸದ್ದಿನದ್ದೇ ಸಂಭ್ರಮ. ರೂಪಂ ಸಿಲ್ಕ್ಸ್‌ನ ಹೊಸ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ರೂಪದರ್ಶಿಯರು ವಸ್ತ್ರವೈಭವವನ್ನು ಹೆಚ್ಚಿಸಿದರು.ಮೆಲ್ಲಮೆಲ್ಲನೆ ಅಡಿಯಿಡುತ್ತ ಬಂದ ನೀಳಕಾಯದ ಹೆಂಗಳೆಯರ ಬಡನಡುವನ್ನು ಸುತ್ತಿದ ಸೀರೆಯ ಅಂದ ರೂಪದರ್ಶಿಯ ಚೆಲುವಿಗೆ ಸೆಡ್ಡು ಹೊಡೆದಂತಿತ್ತು.ಸೀರೆಯುಟ್ಟು, ಕಡುಗುಲಾಬಿಯ ಉದ್ದ ತೋಳಿನ ರವಿಕೆ ತೊಟ್ಟ ರಮ್ಯಾ ಬಾರ್ನಾ ರ‌್ಯಾಂಪ್ ಮೇಲೆ ನಡೆದು ಬಂದಾಗ ಕಣ್ಮನ ಸೆಳೆದದ್ದು ನೀರೆಯೇ ಸೀರೆಯೇ? ಗೊಂದಲ ಬಗೆ ಹರಿಯುವ ಮುನ್ನವೇ ಮತ್ತಷ್ಟು ಸೀರೆಗಳನ್ನು ಅನಾವರಣಗೊಳಿಸಿದ್ದರು.ಬರೀ ಸೀರೆಯೇ ಎನ್ನುವಂತೆಯೂ ಇಲ್ಲ. ಯುವ ಮನ ಸೆಳೆಯುವ ಚೂಡಿದಾರ್‌ಗಳು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗುವಂಥ ಉಡುಗೆ ತೊಡುಗೆಗಳು, ನವ ವಧುವಿನ ಸಂಭ್ರಮವನ್ನೇ ಪ್ರತಿನಿಧಿಸುವ ಘಾಗ್ರಾ ಚೋಲಿಗಳು ಗಮನ ಸೆಳೆದವು.ರಮ್ಯಾಬಾರ್ನಾ ಅವರೊಂದಿಗೆ ಕಾವ್ಯಾ ಶೆಟ್ಟಿ, ಚಿತ್ರ ನಟಿ ರಶ್ಮಿ ಸಹ ಹೆಜ್ಜೆ ಹಾಕಿದರು.

ರೂಪಂ ಸಿಲ್ಕ್ಸ್‌ನ ಮಹಾಲಿಂಗಯ್ಯ ಗೌಡ ಮಾತನಾಡಿ ತಮ್ಮ ಬ್ರಾಂಡ್ ಗುಣಮಟ್ಟ, ವಿನ್ಯಾಸ, ಫ್ಯಾಶನ್ ಟ್ರೆಂಡ್ ಎಲ್ಲಕ್ಕೂ ಹೆಸರಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.ಇನ್ಫೆಂಟ್ರಿ ರಸ್ತೆಯಲ್ಲಿರುವ ಸಫೀನಾ ಪ್ಲಾಜಾದ ಬಳಿಯ ಎಂ.ಜೆ ಟವರ್ಸ್‌ನಲ್ಲಿ ರೂಪಂ ಸಿಲ್ಕ್ಸ್‌ನ ಎರಡು ಅಂತಸ್ತುಗಳ ವಸ್ತ್ರ ಸಂಗ್ರಹವಿದೆ. 6000 ಚದರ ಅಡಿ ವಿಸ್ತೀರ್ಣದಲ್ಲಿರುವ ವಿಶಾಲ ಸಂಗ್ರಹವಿದು.ಮದುವೆಯಂಥ ಸಮಾರಂಭಗಳಿಗೆ ವಸ್ತ್ರ ಖರೀದಿಸಲು ವಿಶಾಲವಾದ ಜಾಗದ ಜೊತೆಗೆ ವ್ಯಾಪಕವಾದ ಸಂಗ್ರಹವನ್ನು ನೀಡಿ, ಆಯ್ಕೆ ಸುಲಭಗೊಳಿಸಲಾಗುತ್ತದೆ ಎನ್ನುವುದು ರೂಪಂ ಕೊಡುವ ಭರವಸೆ.ಹೆಚ್ಚಿನ ಮಾಹಿತಿಗೆ: : 25585876/ 25585877

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.