ಬುಧವಾರ, ಜನವರಿ 22, 2020
25 °C

ಲಂಕಾಗೆ ಸಚಿವ ಕೃಷ್ಣ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ದಶಕದಷ್ಟು ಹಳೆಯ ತಮಿಳು ಭಾಷಿಕರ ಸಮಸ್ಯೆಗೆ ಆದಷ್ಟು ಶೀಘ್ರ ರಾಜಕೀಯ ಪರಿಹಾರ ಕಂಡುಕೊಳ್ಳವ ಪ್ರಯತ್ನ ಹಾಗೂ  ತಮಿಳು ಭಾಷಿಕರ  ಪ್ರದೇಶದಲ್ಲಿ ಯುದ್ಧಾ ನಂತರ ಅನುಷ್ಠಾನಗೊಳಿಸಲಾದ ಅಭಿವೃದ್ಧಿ ಕಾರ್ಯ ಪರಿಶೀಲನೆ... ಇವು ವಿದೇಶಾಂಗ ಸಚಿವ ಎಸ್. ಎಂ.ಕೃಷ್ಣ ಅವರ 4 ದಿನಗಳ ಲಂಕಾ ಭೇಟಿಯ ಪ್ರಮುಖ ಕಾರ್ಯಸೂಚಿ.ಸೋಮವಾರ ಇಲ್ಲಿಗೆ ಆಗಮಿಸಿದ ಅವರನ್ನು ಲಂಕಾ ವಿದೇಶಾಂಗ ಸಚಿವ ಜಿ. ಎಲ್.ಪೆರಿಸ್ ಶಿಷ್ಟಾಚಾರ ಲೆಕ್ಕಿಸದೇ ಆತ್ಮೀಯವಾಗಿ ಬರಮಾಡಿಕೊಂಡರು.ನಾಲ್ಕು ದಿನಗಳ ಭೇಟಿಯಲ್ಲಿ ಉನ್ನತ ನಾಯಕರೊಂದಿಗೆ ಚರ್ಚೆ ನಡೆಸುವುದರ ಜತೆಗೆ, ಎಲ್‌ಟಿಟಿಇ ಪ್ರಾಬಲ್ಯದಲ್ಲಿದ್ದ ಕಿಲಿನೋಚ್ಚಿಗೂ ಭೇಟಿ ನೀಡುವರು. ತಮಿಳರಿಗಾಗಿ ಭಾರತ ನಿರ್ಮಿಸಿರುವ ಸುಮಾರು 100 ಕ್ಕೂ ಅಧಿಕ ಮನೆಗಳನ್ನು ಸಚಿವರು ಹಸ್ತಾಂತರಿಸುವರು.

ಪ್ರತಿಕ್ರಿಯಿಸಿ (+)