ಭಾನುವಾರ, ಜೂಲೈ 12, 2020
22 °C

ಲಂಕಾ ಸುಲಭವಾಗಿ ಕೈಚೆಲ್ಲಿ ನಿಲ್ಲುವ ತಂಡವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಕಾ ಸುಲಭವಾಗಿ ಕೈಚೆಲ್ಲಿ ನಿಲ್ಲುವ ತಂಡವಲ್ಲ

ಕೊಲಂಬೊ: ಟ್ರೆವೋರ್ ಬೇಲಿಸ್ 2007ರಲ್ಲಿ ಶ್ರೀಲಂಕಾ ತಂಡದ ಮುಖ್ಯ ಕೋಚ್ ಸ್ಥಾನವನ್ನು ಅಲಂಕರಿಸಿದಾಗ ಸಿಂಹಳೀಯರ ನಾಡಿನವರಿಗೆ ಮಾತ್ರವಲ್ಲ ಟೆಸ್ಟ್ ಆಡುವ ದೇಶಗಳಲ್ಲಿನ ಕ್ರಿಕೆಟ್ ಪ್ರಿಯರಿಗೂ ಈ ಹೆಸರು ತೀರ ಅಪರಿಚಿತ ಎನಿಸಿತ್ತು. ಆದರೆ ನಾಲ್ಕು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಲಂಕಾ ತಂಡದಲ್ಲಿ ಕಾಣಿಸಿರುವ ಚೈತನ್ಯವನ್ನು ಕಂಡವರೆಲ್ಲಾ ಇದೇ ಕೋಚ್ ಬೆನ್ನು ತಟ್ಟುತ್ತಿದ್ದಾರೆ.ವಿಶ್ವಕಪ್ ಕ್ರಿಕೆಟ್‌ನಲ್ಲಿ ಲಂಕಾ ಪಡೆಯು ಸೆಮಿಫೈನಲ್ ತಲುಪಿದ ನಂತರವಂತೂ ಟ್ರೆವೋರ್ ಗೌರವ ಇನ್ನಷ್ಟು ಹೆಚ್ಚಿದೆ. ಇನ್ನೇನು ಕೆಲವೇ ದಿನಗಳ ನಂತರ ಈ ಕೋಚ್ ಸಿಂಹಳೀಯರ ನಾಡಿಗೆ ವಿದಾಯ ಹೇಳಲಿದ್ದಾರೆ. ಆದರೆ ಅದಕ್ಕೂ ಮುನ್ನ ವಿಶ್ವಕಪ್ ಗೆದ್ದು ಲಂಕಾ ಪಡೆಯು ಮತ್ತೆ ಭಾರಿ ಸದ್ದು ಮಾಡಬೇಕು ಎನ್ನುವುದು ಅವರ ಆಶಯ.ನಾಲ್ಕು ವರ್ಷಗಳ ಹಿಂದೆ ಖ್ಯಾತಿ ಗಳಿಸಿದ ಕೋಚ್‌ಗಳ ಸಾಲಿನಲ್ಲಿ ನಿಂತಿರದಿದ್ದ ಟ್ರೆವೋರ್ ಕಡೆಗೆ ಈಗ ಕ್ರಿಕೆಟ್ ಜಗತ್ತು ಬೆರಗಾಗಿ ನೋಡುತ್ತಿದೆ. ಡೇವ್ ವಾಟ್ಮೋರ್‌ಗಿಂತ ಪ್ರಭಾವಿಯಾದ ರೀತಿಯಲ್ಲಿ ಲಂಕಾ ತಂಡದಲ್ಲಿ ಹೊಸ ಚೈತನ್ಯವನ್ನು ತುಂಬಿದ ನ್ಯೂ ಸೌತ್ ವೇಲ್ಸ್ (ಆಸ್ಟ್ರೇಲಿಯಾ) ಮಾಜಿ ಕ್ರಿಕೆಟಿಗನ ಹಿರಿಮೆ ಹೆಚ್ಚಿದೆ. ತಮ್ಮ ಮೇಲೆ ಇಷ್ಟೊಂದು ಅಭಿಮಾನವನ್ನು ಇಟ್ಟುಕೊಂಡಿರುವ ಶ್ರೀಲಂಕಾದವರಿಗೆ ‘ವಿಶ್ವಕಪ್ ವಿಜಯದೊಂದಿಗೆ ವಿದಾಹ ಹೇಳಬೇಕು’ ಎನ್ನುವುದು ಟ್ರೆವೋರ್ ಆಶಯ. ‘ಸುಲಭವಾಗಿ ಕೈಚೆಲ್ಲಿ ನಿಲ್ಲುವಂಥ ತಂಡವಲ್ಲ ಇದು. ಎದುರಾಳಿಯನ್ನು ಸಂಕಷ್ಟದಲ್ಲಿ ಸಿಲುಕಿಸುವ ಸತ್ವವನ್ನೂ ಹೊಂದಿದೆ. ಆದ್ದರಿಂದ ಚಾಂಪಿಯನ್ ಆಗಬೇಕೆಂದು ಆಶಿಸುವುದರಲ್ಲಿ ತಪ್ಪಿಲ್ಲ’ ಎಂದು ಟ್ರೆವೋರ್ ಅವರು ತಿಳಿಸಿದರು.‘ವಿಶ್ವಕಪ್ ಈಗ ಕೊನೆಯ ಹಂತದತ್ತ ಸಾಗಿದೆ. ಒತ್ತಡವೂ ಹೆಚ್ಚು. ಆದರೆ ಅದನ್ನು ನಿಭಾಯಿಸಿಕೊಂಡು ಉತ್ತಮ ಆಟವಾಡುವ ಶಕ್ತಿಯುಳ್ಳು ಕ್ರಿಕೆಟಿಗರು ಶ್ರೀಲಂಕಾ ತಂಡದಲ್ಲಿ ಇದ್ದಾರೆ’ ಎಂದ ಅವರು ‘ನಂಬಿಕೆ ಹಾಗೂ ಆತ್ಮವಿಶ್ವಾಸ ಅತಿ ಮುಖ್ಯ. ಎದುರಾಳಿ ಯಾರೇ ಇದ್ದರೂ, ನಮ್ಮ ಪಾಡಿಗೆ ಉತ್ತಮ ಪ್ರದರ್ಶನ ನೀಡುವತ್ತ ಗಮನ ನೀಡಿದರೆ ಸಾಕು’ ಎಂದರು.

ಲಂಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ ಎನ್ನುವುದನ್ನು ಒಪ್ಪದ ಅವರು ‘ಕೆಲವೊಮ್ಮೆ ಹೀಗೆ ಆಗುತ್ತದೆ. ಹೆಚ್ಚು ರನ್‌ಗಳನ್ನು ಗಳಿಸಿರದಿದ್ದರೂ, ತಂಡದ ಇನಿಂಗ್ಸ್ ಕಟ್ಟುವಲ್ಲಿ ಸಹಕರಿಸಿದ್ದಾರೆ. ಮೇಲಿನ ಕ್ರಮಾಂಕದಲ್ಲಿ ಆಡುತ್ತಿರುವ ಬ್ಯಾಟ್ಸ್‌ಮನ್‌ಗಳು ನಂತರ ಕ್ರೀಸ್‌ಗೆ ಬರುವವರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಎಚ್ಚರಿಕೆವಹಿಸಿರುವುದು ವಿಶೇಷ’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.