ಶನಿವಾರ, ಜನವರಿ 18, 2020
26 °C

ಲಂಕೇಶ್ ಪರಂಪರೆ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಕೇಶ್ ಅವರ ನಂತರ ಪಾರಂಪರಿಕವಾಗಿ ಬರೆಯುವಲ್ಲಿ ಎನ್.ಎಸ್ ಶಂಕರ ಒಬ್ಬರಾಗಿದ್ದಾರೆ. ಅವರ `ಹುಡುಕಾಟ~ ಪುಸ್ತಕದಲ್ಲಿ ಹೀನಾಯ ಸ್ಥಿತಿಯಲ್ಲಿರುವ ಮಾನವನ ಚಿತ್ರಣವನ್ನು ತಂದಿದ್ದಾರೆ ಎಂದು ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.ಅವರು ಪ್ರೆಸ್‌ಕ್ಲಬ್ ಪ್ರಕಾಶನ ಹೊರತಂದಿರುವ ಚಿತ್ರನಿರ್ದೇಶಕ ಎನ್.ಎಸ್ ಶಂಕರ `ಹುಡುಕಾಟ~ ಪುಸ್ತಕ ಬಿಡುಗಡೆ ಮಾಡಿ  ಮಾತನಾಡುತ್ತ, `ಪತ್ರಿಕೋದ್ಯಮವೇ ಬೇಡ ಎಂದುಕೊಂಡಿದ್ದ ನನಗೆ ಮತ್ತೆ ಅದೇ ಕ್ಷೇತ್ರಕ್ಕೆ ಕರೆತಂದವರು ಶಂಕರ. ಅವರ ಪುಸ್ತಕದಲ್ಲಿ ಪತ್ರಿಕೋದ್ಯಮಕ್ಕೆ ಬೇಕಾದ  ಹಲವು ಲೇಖನಗಳು ಇವೆ~ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಕವಿ ಡಾ.ಚಂದ್ರಶೇಖರ ಕಂಬಾರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃತಿಕಾರ ಎನ್.ಎಸ್ ಶಂಕರ್, ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ ಪೊನ್ನಪ್ಪ, ಕಾರ್ಯದರ್ಶಿ ಸದಾಶಿವ ಶಣೈ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)