ಸೋಮವಾರ, ಮೇ 10, 2021
22 °C

ಲಂಚ ನೀಡಿಲ್ಲ- ಟಟ್ರಾ ಕಂಪೆನಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಭಾರತೀಯ ಸೇನೆಗೆ ಟಟ್ರಾ ಟ್ರಕ್‌ಗಳ ಮಾರಾಟ ಮಾಡಲು ತಾನು ಯಾವುದೇ ಲಂಚ ನೀಡಿಲ್ಲ ಎಂದು ಈ ಟ್ರಕ್‌ನ ನಿರ್ಮಾಣ ಕಂಪೆನಿಯಾದ ಚೆಕ್ ಗಣರಾಜ್ಯದ ಟಟ್ರಾ ಎ.ಎಸ್. ಸಮರ್ಥಿಸಿಕೊಂಡಿದೆ.ಭಾರತೀಯ ಸೇನೆಯೊಂದಿಗಾಗಲೀ ಅಥವಾ ಅದರ ಪ್ರತಿನಿಧಿಗಳ ಜತೆಯಾಗಲೀ ತಾನು ನೇರವಾದ ಅಥವಾ ಪರೋಕ್ಷವಾದ ಸಂಬಂಧ ಹೊಂದಿಲ್ಲ ಎಂದು ಕಂಪೆನಿ ಸ್ಪಷ್ಟನೆ ನೀಡಿದೆ.ಈ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಒಳಪಡಿಸಿರುವ ವೆಕ್ಟ್ರಾ ಕಂಪೆನಿಯ ನಿರ್ದೇಶಕ ರವಿ ರಿಷಿ ಅವರಿಂದ ತಾನು ವಿವರಣೆ ಕೋರುವುದಾಗಿಯೂ ಕಂಪೆನಿ ತಿಳಿಸಿದೆ.ರವಿ ರಿಷಿ ಅವರಾಗಲೀ ಅಥವಾ ಅವರ ಬಂಡವಾಳ ಹೂಡಿಕೆ ಕಂಪೆನಿಯಾದ ವೆಕ್ಟ್ರಾ ಲಿಮಿಟೆಡ್ ಆಗಲೀ ಟಟ್ರಾ ಎ.ಎಸ್. ಮೇಲೆ ಯಾವುದೇ ರೀತಿಯ ನಿಯಂತ್ರಣ ಹೊಂದಿಲ್ಲ; ಈ ಹಿಂದೆಯೂ ನಿಯಂತ್ರಣ ಹೊಂದಿರಲಿಲ್ಲ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.