ಹುಬ್ಬಳ್ಳಿ: ಪ್ರಪ್ರಥಮ ಬಾರಿಗೆ ಲಂಡನ್ನಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011ಅನ್ನು ಅಲ್ಲಿಯ ಸಂಗಮ ಸಂಸ್ಥೆಯು ಬರುವ ಆಗಸ್ಟ್ 27 ಮತ್ತು 28ರಂದು ಆಯೋಜಿಸಿದೆ. ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದಿಂದ ಉತ್ತೇಜಿತರಾಗಿರುವ ಸಂಸ್ಥೆಯು ಲಂಡನ್ನಲ್ಲಿಯೂ ಸಮ್ಮೇಳನ ನಡೆಸುತ್ತಿದೆ . ಸಮ್ಮೇಳನದ ಆಯೋಜಕರಾದ ಕುಮಾರ ಕುಂಟಿಕಾನಮಠ, ಸಂಪತ್ ಯಾದವಾಡ, ಶರತ್ ಕೋಲಾರ, ರಾಮಚಂದ್ರ ಅಯ್ಯರ್ ‘ಪ್ರಜಾವಾಣಿ’ಗೆ ಈ ಕುರಿತು ಇ-ಮೇಲ್ನಲ್ಲಿ ಸುದ್ದಿ ಕಳಿಸಿದ್ದಾರೆ.

‘ಕನ್ನಡನಾಡಿನ ಭಾಷೆ, ಸಂಸ್ಕೃತಿಯನ್ನು ಯುರೋಪ್ ಮತ್ತು ಪ್ರಪಂಚದಲ್ಲಿ ಪ್ರಚಾರ ಮಾಡುವ ಯುರೋಪ್ ದೇಶಗಳ ಮತ್ತು ಕರ್ನಾಟಕದೊಂದಿಗೆ ವ್ಯವಹಾರಿಕ, ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಈ ಸಮ್ಮೇಳನ ನಡೆಸಲಾಗುತ್ತಿದೆ. ಸಮ್ಮೇಳನದ ಅಂಗವಾಗಿ ಸಾಹಿತ್ಯ, ಉದ್ಯಮ, ಸಂಗೀತ, ವೈದ್ಯಕೀಯ, ಹಾಸ್ಯಗೋಷ್ಠಿಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ.

ಲಂಡನ್ನಿನ ಇತಿಹಾಸ ಪ್ರಸಿದ್ಧವಾದ ಪ್ರವಾಸಿ ತಾಣಗಳನ್ನು, ಉದ್ಯಮ ಸಂಸ್ಥೆಗಳನ್ನು, ರಾಜಕೀಯ ವ್ಯವಸ್ಥೆಯನ್ನು ನಮ್ಮ ಕನ್ನಡಿಗರು ನೋಡಲಿ. ಹಾಗೆಯೇ ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ನಮ್ಮ ರಾಜ್ಯದ ಏಳ್ಗೆಗೆ ಉಪಯೋಗಿಸಿಕೊಳ್ಳಲು ಈ ಸಮ್ಮೇಳನ ವೇದಿಕೆಯಾಗಲಿದೆ’ ಎಂದು ಅವರು ವಿವರಿಸಿದ್ದಾರೆ. ‘ಮುಂದಿನ ವರ್ಷಗಳಲ್ಲಿ ಯುರೋಪಿನ ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಬೆಲ್ಜಿಯಂ, ಸ್ವಿಜರ್ಲೆಂಡ್ ರಾಜಧಾನಿಗಳಾದ ಪ್ಯಾರಿಸ್, ಫ್ರಾಂಕ್ಫರ್ಟ್, ಬ್ರಸ್ಸೆಲ್ಸ್, ಡೆನ್ಮಾರ್ಕ್, ಜಿನಿವಾ ಮತ್ತಿತರ ಕಡೆ ಸಮ್ಮೇಳನ ಆಯೋಜಿಸುವ ಯೋಜನೆಯೂ ಇದೆ’ ಎಂದು ಆಯೋಜಕರು ತಿಳಿಸಿದ್ದಾರೆ.

ವಿವರಗಳು ಈ ಕೆಳಗಿನ ವಿಳಾಸಗಳಲ್ಲಿ ಲಭ್ಯ:
ಕುಮಾರ್ ಕುಂಟಿಕಾನಮಠ, ನಿರ್ದೇಶಕ, ಎಎಲ್ಸಿ ಲಿಮಿಟೆಡ್, 9 ವಿಲಿಯಂ ಕೋರ್ಟ್, 68, ಗಿಲ್ಡ್ಫೋರ್ಡ್ ರಸ್ತೆ ಪೂರ್ವ, ಫಾರ್ನ್ಬೊರೊ, ಯುಕೆ (ಮೊ:00447791204551, 00441252513646) ಇ ಮೇಲ್: kumar@kuntikanamata.com.
ಸಂಪತ್ ಯಾದವಾಡ, ನಿರ್ದೇಶಕ, ಎಎಲ್ಸಿ ಲಿಮಿಟೆಡ್, 16, ಆರ್ಡ್ವಿಕ್ ಕೋರ್ಟ್, 190, ಸಿಕಾಮೋರ್ ರಸ್ತೆ, ಫಾರ್ನ್ಬೊರ್ಗ್, ಜಿಯು146ಆರ್ಎಚ್, (ಮೊ: 00447876240902) ಇ ಮೇಲ್: syadawad@alconsupplies.co.uk.
ಶರತ್ ಕೋಲಾರ ರಾಮಚಂದ್ರ ಅಯ್ಯರ್, ನಿರ್ದೇಶಕ, ಅನಿಕಾ ಬಿಸಿನೆಸ್ ಸಿಸ್ಟೆಮ್ಸ್ ಲಿ., 30 ರಾಕ್ಸಹ್ಯಾಮ್ ಅವೆನ್ಯೂ, ಹೆಮೆಲ್ ಹ್ಯಾಮಸ್ಟೆಡ್, ಹರ್ಟಫೋರ್ಡ್ಷೈರ್, ಎಚ್ಪಿ39 ಎಚ್ಎಫ್. (ಮೊ: 00447813339923) ಇ ಮೇಲ್: siyer@anikabs.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.