ಕ್ವಿಟೊ (ಎಎಫ್ಪಿ): ಲಂಡನ್ನಿನಲ್ಲಿರುವ ತನ್ನ ದೇಶದ ರಾಯಭಾರ ಕಚೇರಿಯಲ್ಲಿ ಬಚ್ಚಿಡಲಾಗಿದ್ದ ಮೈಕ್ರೋಫೋನ್ಗಳು ಬುಧವಾರ ಪತ್ತೆಯಾಗಿವೆ ಎಂದು ಈಕ್ವೆಡಾರ್ ಹೇಳಿದೆ.

`ರಹಸ್ಯ ಮಾಹಿತಿಗಳನ್ನು ಬಹಿರಂಗ ಪಡಿಸುವ ವಿಕಿಲೀಕ್ಸ್ ಅಂತರ್ಜಾಲ ತಾಣದ ಸಂಸ್ಥಾಪಕ ಜೂಲಿಯನ್ ಅಸಾಂಜ್ ನಮ್ಮ ದೂತಾವಾಸದ ಆಶ್ರಯದಲ್ಲಿದ್ದಾರೆ. ಆದ್ದರಿಂದ ಬೇಹುಗಾರಿಕೆ ನಡೆಸುವ ಸಲುವಾಗಿ ಮೈಕ್ರೋ ಫೋನ್ಗಳನ್ನು ಅಡಗಿಸಿಡಲಾಗಿದೆ' ಎಂದು ಈಕ್ವೆಡಾರ್ ವಿದೇಶಾಂಗ ಸಚಿವ ರಿಕಾರ್ಡೊ ಪ್ಯಾಟಿನೊ ಆರೋಪಿಸಿದ್ದಾರೆ.

`ಇದರ ಹಿಂದೆ ಯಾವ ಯಾವ ರಾಷ್ಟ್ರಗಳ ಕೈವಾಡ ಇದೆ ಎನ್ನುವ ಕುರಿತು ವಿವರಣೆ ನೀಡುವಂತೆ ರಾಯಭಾರಿ ಅವರಿಗೆ ಸೂಚಿಸಲಾಗಿದೆ' ಎಂದು ಪ್ಯಾಟಿನೊ ಹೇಳಿದ್ದಾರೆ.

`ಸ್ನೊಡೆನ್ ಪ್ರಕರಣಕ್ಕೂ ದೂತಾವಾಸದಲ್ಲಿ ಮೈಕ್ರೋ ಫೋನ್ ಬಚ್ಚಿಟ್ಟಿದ್ದಕ್ಕೂ ಸಂಬಂಧ ಕಲ್ಪಿಸುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪದ ಸಂಬಂಧ ಸ್ವೀಡನ್ಗೆ ಹಸ್ತಾಂತರಗೊಳ್ಳುವ ಭೀತಿ ಎದುರಿಸುತ್ತಿರುವ ಅಸಾಂಜ್, ವರ್ಷದಿಂದ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.