ಲಂಡನ್: ಮಹಾತ್ಮಾ ಗಾಂಧಿಯವರ ಒಂದು ಜೊತೆ ಲೋಟಗಳು, ~ಚರಖಾ~, 1948ರಲ್ಲಿ ಗಾಂಧಿಯವರು ಹತ್ಯೆಯಾದ ಸ್ಥಳದಿಂದ ತರಲಾದ ಒಂದು ಚಿಮುಟ ಮಣ್ಣು, ಮತ್ತು ಹುಲ್ಲಿನ ಎಸಳುಗಳು- ಏಪ್ರಿಲ್ 17ರಂದು ಶ್ರೋಪ್ಷೈರ್ ನಲ್ಲಿ ನಡೆಯಲಿರುವ ಹರಾಜಿಗೆ ಇಡಲಾಗುತ್ತಿರುವ ಕೆಲವು ಅಪರೂಪದ ಐಟಂಗಳು ಇವು.

ಮುಲ್ಲೊಕ್ಸ್ ಅವರ ಮೂಲಕ ನಡೆಯುವ ಈ ಹರಾಜು ಅಂದಾಜು ಒಂದು ಲಕ್ಷ ಪೌಂಡ್ ಗಳನ್ನು ತಂದು ಕೊಡುವ ನಿರೀಕ್ಷೆ ಇದೆ.

ಹರಾಜುಗಾರರು ನಿಗದಿ ಪಡಿಸಿರುವ ಮಾರ್ಗದರ್ಶಿ ಹರಾಜು ದರವು 10,000 ಪೌಂಡ್ ಗಳಿಂದ 15,000 ಪೌಂಡ್ ಗಳಷ್ಟು ಇದೆ. ಹರಾಜಿಗೆ ಇಡಲಾಗುತ್ತಿರುವ ಗಾಂಧೀಜಿಯವರ ಒಂದು ಜೊತೆ ಲೋಟಗಳು, ಚರಖಾ ಮತ್ತು ಅವರು ನವದೆಹಲಿಯಲ್ಲಿ ಹತ್ಯೆಯಾದ ಸ್ಥಳದಿಂದ ತಂದ ಚಿಮುಟದಷ್ಟು ಮಣ್ಣು ಮತ್ತು ಹುಲ್ಲಿನ ಎಳೆಗಳನ್ನು ಒಳಗೊಂಡ ಪುಟ್ಟ ಸಂಪುಟಕ್ಕೆ ಹರಾಜುಗಾರರು ಈ ಕನಿಷ್ಠ ಹಾಗೂ ಗರಿಷ್ಠ ಮಾರ್ಗದರ್ಶಿ ದರ ನಿಗದಿ ಪಡಿಸಿದ್ದಾರೆ.

ಮಣ್ಣು ಮತ್ತು ಹುಲ್ಲಿನ ಎಸಳುಗಳನ್ನು ಪಿ.ಪಿ. ನಂಬಿಯಾರ್ ಎಂಬ ಒಬ್ಬರು ಸಂಗ್ರಹಿಸಿದ್ದಾರೆ. ಪುಟ್ಟದಾದ ಮರದ ಕರಂಡಕವೊಂದರಲ್ಲಿ ಇವುಗಳ ಮಾದರಿಗಳನ್ನು ಇರಿಸಲಾಗಿದೆ.

ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿ ಅವರು 1948ರ ಜನವರಿ 30ರಂದು ಗುಂಡೇಟಿಗೆ ಬಲಿಯಾದ ದಿನ ಅದೇ ಸ್ಥಳದಿಂದ ನಾನು ಲೋಟಗಳು, ಹಿಡಿಮಣ್ಣು ಮತ್ತು ಹುಲ್ಲಿನ ಎಸಳುಗಳನ್ನು ಸಂಗ್ರಹಿಸಿದ್ದೆ ಎಂದು ನಂಬಿಯಾರ್ ತಿಳಿಸಿದ್ದಾರೆ.

~ಲೋಟಗಳಲ್ಲಿದ್ದ ರಕ್ತದ ಕಲೆಗಳು ಆರಿ ಹೋಗಿವೆ. ಹುಲ್ಲಿನ ಎಸಳುಗಳನ್ನು ನಾನು ಕತ್ತರಿಸಿ ಇಟ್ಟುಕೊಂಡದ್ದಲ್ಲದೆ, ಹಿಡಿಮಣ್ಣು ತೆಗೆದುಕೊಂಡು ಹಿಂದಿ ಪತ್ರಿಕೆಯೊಂದರಲ್ಲಿ ಪೊಟ್ಟಣ ಕಟ್ಟಿಕೊಂಡಿದ್ದೆ. ಈಗಲೂ ಇವು ನನ್ನ ಪೆಟ್ಟಿಗೆಯಲ್ಲಿ ಇವೆ. ನಾನು ಇವುಗಳನ್ನು ಚಿನ್ನಾಭರಣ ಇಡುವ ಪೆಟ್ಟಿಗೆಯಲ್ಲಿ ಇಟ್ಟಿದ್ದೇನೆ. ಈ ಚಿನ್ನಾಭರಣ ಪೆಟ್ಟಿಗೆ ಒಂದು ವರ್ಷದ ಬಳಿಕ ನಾನು ಇಂಡೋ-ಚೀನಾದಿಂದ ತಂದದ್ದು. ನನಗೆ ಇದು ಭಾವನಾತ್ಮಕವಾದ ಸಂಪತ್ತು~ ಎಂಬುದಾಗಿ ನಂಬಿಯಾರ್ ಅವರನ್ನು ಉಲ್ಲೇಖಿಸಿ ಮುಲ್ಲೋಕ್ಸ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.