ಮಹಿಳಾ ದಿನಕ್ಕೆ ಮಹಿಳೆಯರ ಹಕ್ಕುಗಳ ಬಗ್ಗೆ, ಹೆಣ್ಣು ಭ್ರೂಣ ಸಂರಕ್ಷಣೆಯ ಬಗ್ಗೆ ವಿಚಾರ ಸಂಕಿರಣ, ಸಮಾವೇಶ, ಚರ್ಚೆ ಎಲ್ಲವೂ ವೇದಿಕೆಯ ಮೇಲೆ ನಡೆಯುತ್ತಿವೆ.
ಆದರೆ ನಿಮ್ಮಂದಿಗೆ ಇರುವ, ಅಮ್ಮನಿಗೆ, ಮಡದಿಗೆ, ಮಗಳಿಗೆ ಏನು ಮಾಡಿದ್ದೀರಿ? ಅವರಿಗೆ ನೀಡುವ ಬೆಚ್ಚನೆಯ ಪ್ರೀತಿ, ಸುರಕ್ಷೆಯೊಂದಿಗೆ ಕೊಡುಗೆಯನ್ನೂ ನೀಡಿ ಎನ್ನುತ್ತಿವೆ ಬೆಂಗಳೂರಿನ ಹಲವಾರು ಮಳಿಗೆಗಳು.

ನಿಮ್ಮ ಬಾಂಧವ್ಯ ಚಿರನೂತನವಾಗಿರಲಿ ಎಂದು ಆಶಿಸುತ್ತ ಗೀತಾಂಜಲಿ ಸಮೂಹದ ಆಭರಣ ಸಂಸ್ಥೆಯು ಮಹಿಳಾ ದಿನಕ್ಕಾಗಿ ವಿಶೇಷ ಆಭರಣಗಳ ಸಂಗ್ರಹವನ್ನೇ ಬಿಡುಗಡೆ ಮಾಡಿದೆ.

ಆಸ್ಮಿ, ಸಂಗಿನಿ, ದಿಯಾ, ಗಿಲಿ ಡಿ ದಮಾಸ್, ರಿವಾಜ್ ಮುಂತಾದ ಹೆಸರಿನಲ್ಲಿರುವ ವಿಶೇಷ ಸಂಗ್ರಹವನ್ನೇ ಬಿಡುಗಡೆ ಮಾಡಿದೆ. ಓಲೆ, ಉಂಗುರ, ಸರ ಮುಂತಾದವು ಈ ಸಂಗ್ರಹದಲ್ಲಿವೆ. ಹುಟ್ಟುಹಬ್ಬ, ವಾರ್ಷಿಕೋತ್ಸವಕ್ಕೆ ಎಲ್ಲರೂ ಉಡುಗೊರೆ ನೀಡುತ್ತಾರೆ.

ಆದರೆ ಹೆಣ್ತನವನ್ನು ಗೌರವಿಸುವಂತೆ, ಅವಳ ಅಸ್ಮಿತೆಯನ್ನು ಪ್ರೀತಿಸುವಂತೆ ಮಾಡಲು ಈ ಆಭರಣಗಳನ್ನು ಕೊಡುಗೆಯಾಗಿ ನೀಡಿ ಎಂದೂ ಸಲಹೆ ನೀಡಿದ್ದಾರೆ.

ಕುಟುಂಬವನ್ನು ಪ್ರೀತಿಸುತ್ತ, ಕುಟುಂಬಕ್ಕಾಗಿ ತನ್ನನ್ನೇ ಸಮರ್ಪಿಸಿಕೊಳ್ಳುವ ಈ ಅರ್ಪಣಾ ಭಾವ ಮಹಿಳೆಯರಿಗಲ್ಲದೆ ಇನ್ನಾರಿಗಿದೆ ಎಂದು ಪ್ರಶ್ನಿಸುತ್ತದೆ ಡಿವೈನ್ ಸ್ಯಾಲಿಟೇರ್.
ದೇವರ ಈ ಅದ್ಭುತ ಸೃಷ್ಟಿಗೆ ಅನನ್ಯ ಕೊಡುಗೆ ನೀಡಿ ಎಂದೂ ಕರೆ ನೀಡುತ್ತದೆ.

ವಜ್ರದ ಆಭರಣಗಳನ್ನು ನೀಡಿ, ನಿಮ್ಮ ಶಾಶ್ವತ ಪ್ರೀತಿಯನ್ನು ವ್ಯಕ್ತ ಪಡಿಸಿ ಎಂದೂ ಹೇಳಿದೆ.ಆಭರಣ್ ಜ್ಯುವೆಲ್ಸ್ನವರು ಪ್ಲಾಟಿನಂನ ಓಲೆ, ಬಳೆ, ಉಂಗುರಗಳನ್ನು ಕೊಡುಗೆಯಾಗಿ ನೀಡಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ.

ಮಹಿಳೆಯರ ಕ್ರಿಯಾಶೀಲ ಹಾಗೂ ಅಂತಃಶಕ್ತಿಗೆ ನಮನ ಸಲ್ಲಿಸಲು ಈ ಶ್ರೇಣಿಯನ್ನು ಪರಿಚಯಿಸಲಾಗಿದೆ ಎಂದೂ ಹೇಳಲಾಗಿದೆ. ಈ ಶ್ರೇಣಿಯು 5000 ರೂಪಾಯಿಗಳಿಂದ ಆಂಭವಾಗುತ್ತದೆ.

ವಜ್ರದಾಭರಣಗಳೆಲ್ಲ ಈ ಮಾರ್ಚ್ ತಿಂಗಳಲ್ಲಿ ದುಬಾರಿ ಎನಿಸಿದರೆ ನಿಮ್ಮ ಸಂಗಾತಿಯನ್ನು ಟೇಸ್ಟಿ ಟ್ಯಾಂಗಲ್ಸ್ಗೆ ಕರೆದೊಯ್ಯಿರಿ ಅಥವಾ ಮಹಿಳೆಯರೂ ತಮ್ಮ ದಿನದ ಸಂಭ್ರಮಾಚರಣೆಗೆ ಟೇಸ್ಟಿ ಟ್ಯಾಂಗಲ್ಸ್ಗೆ ಭೇಟಿ ನೀಡಬಹುದು.

ಮಾರ್ಚ್ 9ರವರೆಗೆ ಇಲ್ಲಿ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಊಟದ ಟೇಬಲ್ಗೆ ಬರುವವರಲ್ಲಿ ಮೂವರು ಅಥವಾ ಮೂವರಿಗಿಂತ ಹೆಚ್ಚು ಮಹಿಳೆಯರು ಇದ್ದರೆ ಶೇ 15ರಷ್ಟು ರಿಯಾಯಿತಿ ಪಡೆಯಬಹುದು ಎಂದು ಹೇಳಿದೆ.

ಲಲನೆಯರೆಲ್ಲ ಒಂದು ದಿನವಾದರೂ ಅಡುಗೆ ಮನೆಯಿಂದ ಆಚೆ ಬನ್ನಿ. ಸ್ನೇಹಿತೆಯರ ಒಡಗೂಡಿ ಊಟ ಮಾಡಿ ಎಂಬ ಇನ್ನೊಂದು ಆಹ್ವಾನವಿದೆ.ಆಗ್ನೇಯ ಏಷ್ಯಾದ ಅಡುಗೆಯನ್ನು ಇಲ್ಲಿ ಸವಿಯಬಹುದು.

ಸಿಂಗಾಪುರದ ನೂಡಲ್ಸ್, ಚಿಕನ್ ಸತೇಯ್, ನಾಸಿಗೊರೆಂಗ್, ಫ್ರೈಡ್ ಐಸ್ಕ್ರೀಮ್, ಸ್ಟಿಕ್ಕಿ ರೈಸ್ ಮುಂತಾದವನ್ನು ಸವಿಯಬಹುದು. ಲಾ ಕಾರ್ಟೆ ಮೆನುಗೆ ಮಾತ್ರ ಈ ರಿಯಾಯಿತಿ ಅನ್ವಯಿಸುತ್ತದೆ.

ಟೇಸ್ಟಿ ಟ್ಯಾಂಗಲ್ಸ್ಗೆ ಭೇಟಿ ನೀಡಿ, ನಿಮ್ಮ ರಸಗ್ರಂಥಿಗಳನ್ನು ತೀಕ್ಷ್ಣಗೊಳಿಸಿ ಎಂದು ಹೋಟೆಲ್ ಕರೆ ನೀಡಿದೆ. ಮಲ್ಯ ರಸ್ತೆಯಲ್ಲಿರುವ ಯುಬಿಸಿಟಿಯ ನಾಲ್ಕನೇ ಹಂತದಲ್ಲಿದೆ ಟೇಸ್ಟಿ ಟ್ಯಾಂಗಲ್ಸ್ ರೆಸ್ಟೊಬಾರ್. ಹೆಚ್ಚಿನ ಮಾಹಿತಿಗೆ 41738812.

ವೈಟ್ ಫೀಲ್ಡ್ನಲ್ಲಿರುವ `ಅ ಲೋಫ್ಟ್~ ಕೂಡ ಊಟಕ್ಕೆ ವಿಶೇಷ ರಿಯಾಯಿತಿಯನ್ನು ಪ್ರಕಟಿಸಿದೆ. ಬಫೆಯಲ್ಲಿ ದಕ್ಷಿಣ ಭಾರತೀಯ ಹಾಗೂ ಮೆಡಿಟರೇನಿಯನ್ ಮೆನುವನ್ನು ಪರಿಚಯಿಸಿದೆ.

ಟ್ಯಾಕೊ ಕೌಂಟರ್ಗಳನ್ನು ಬಫೆ ಆವರಣದಲ್ಲಿಯೇ ಆಯೋಜಿಸಲಾಗಿದೆ. ಪಾಸ್ತಾ, ಪೆಸರಟ್ಟು ಮುಂತಾದ ಖಾದ್ಯಗಳನ್ನು ಅಲ್ಲಿಯೇ ತಯಾರಿಸಿ ನೀಡಲಾಗುವುದು. ಇದಲ್ಲದೇ ಮೂರು ಬಗೆಯ ಐಸ್ಕ್ರೀಮ್ಗಳೂ ಬಾಯಿರುಚಿಗೆ ಇವೆ.

ಮಹಿಳಾ ದಿನದ ವಿಶೇಷವಾಗಿ ಮಹಿಳೆಯರಿಗೆ ಸ್ಯಾಂಗ್ರಿಯಾ ಸಹ ನೀಡಲಾಗುತ್ತದೆ. ಮಹಿಳೆಯರಿಗೆ ಶೇ 30ರಷ್ಟು ವಿಶೇಷ ರಿಯಾಯಿತಿಯನ್ನು ಆಹಾರ ಹಾಗೂ ಪಾನೀಯಗಳ ಮೇಲೆ ನೀಡಲಾಗುವುದು ಎಂದು ಪ್ರಕಟಿಸಿದೆ. ಒಂದು ಊಟದ ಬೆಲೆ 700 ರೂಪಾಯಿ ಹಾಗೂ ಹೆಚ್ಚುವರಿ ತೆರಿಗೆ. ಸಮಯ ಸಂಜೆ 7ರಿಂದ ರಾತ್ರಿ 11ರವರೆಗೆ.

ಹುಟ್ಟಿನಿಂದ ಸಾವಿನವರೆಗೂ ಕಾಲಕಾಲಕ್ಕೆ ಸಾಂಗತ್ಯ ನೀಡುವ ಮಹಿಳೆಗೆ ಒಂದು ವಾಚನ್ನು ಕೊಡುಗೆಯಾಗಿ ನೀಡಿ ಎಂದು ಸೀಕೊ ಕಂಪೆನಿ ಹೇಳುತ್ತಿದೆ. ಎಸ್ಆರ್ಕೆಜೆಡ್ 93 ಹೆಸರಿನ ವಾಚು ಮಹಿಳೆಯರಿಗೆ ವಿಶೇಷ ಭಾವವನ್ನು ನೀಡುತ್ತದೆ.

ನೀವು ಅವರನ್ನು ಸದಾಕಾಲ ಸ್ಮರಿಸುತ್ತೀರಿ, ಸದಾಕಾಲ ಅವರೊಂದಿಗೆ ಇರುತ್ತೀರಿ ಎಂಬ ಭಾವವನ್ನು ನೀಡುತ್ತದೆ ಎಂದೂ ಸೀಕೊ ಕಂಪೆನಿ ಹೇಳಿದೆ. ವಾಚಿನ ಬೆಲೆ 33,500 ರೂಪಾಯಿ.

ವಾಚಿನಲ್ಲಿ ಮೂವತ್ತು ಅಮೂಲ್ಯ ವಜ್ರಗಳನ್ನು ಅಳವಡಿಸಲಾಗಿದೆ. ಕಾಲದಷ್ಟೇ ಅಮೂಲ್ಯವಾದ ಉಡುಗೊರೆ ಇದು ಎಂಬ ಭರವಸೆ ಸೀಕೊ ಕಂಪೆನಿಯದ್ದು.
ಈ ಎಲ್ಲ ಉಡುಗೊರೆಗಳಿಗಿಂತ ಮಹತ್ವದ್ದು ಎಂದರೆ ಅಮ್ಮ, ಹೆಂಡತಿ, ಸಹೋದರಿ, ಸ್ನೇಹಿತೆ ಮುಂತಾದ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯ ಆರೋಗ್ಯ.

ಅವಳ ಸ್ವಾಸ್ಥ್ಯದ ಬಗ್ಗೆ ಗಮನ ನೀಡಿ. ನಿಜವಾಗಿಯೂ ಅವಳ ಬಗ್ಗೆ ನಿಮಗೆ ಕಾಳಜಿ ಇದೆ ಎಂಬುದನ್ನು ಮನವರಿಕೆ ಮಾಡಿಕೊಡಿ ಎನ್ನುತ್ತಾರೆ ಸ್ತ್ರೀ ತಜ್ಞ ಡಾ.ರಮೇಶ್.
ಅವರು ಮಹಿಳಾದಿನದ ಪ್ರಯುಕ್ತ ಗರ್ಭಕೊರಳಿನ ಕ್ಯಾನ್ಸರ್ ಬಗ್ಗೆ ವಿಶೇಷ ಜಾಗೃತಿ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.

ಗರ್ಭಕೊರಳಿನ ಕ್ಯಾನ್ಸರ್ನ ಗುಣಲಕ್ಷಣ, ಪತ್ತೆ ವಿಧಾನ, ಚಿಕಿತ್ಸೆ ಕುರಿತು ಮಾಹಿತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಡಾ. ರಮೇಶ್ ಆಸ್ಪತ್ರೆಯ ಮುಖ್ಯಸ್ಥೆ ಡಾ.ಶೋಭಾ ರಮೇಶ್ ಮಾಹಿತಿ ನೀಡಲಿದ್ದಾರೆ. 30ರಿಂದ 55 ವಯೋಮಾನದ ಮಹಿಳೆಯರೇ ಹೆಚ್ಚಾಗಿ ಗರ್ಭಕೊರಳಿನ ಕ್ಯಾನ್ಸರ್ಗೆ ತುತ್ತಾಗುತ್ತಾರೆ.

ಕನಿಷ್ಠ 2 ವರ್ಷಗಳಿಗೊಮ್ಮೆ ಅಗತ್ಯದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂಬ ಸಲಹೆಯನ್ನೂ ವೈದ್ಯರು ನೀಡಿದ್ದಾರೆ.ಸ್ವಾಸ್ಥ್ಯಮಯ ಬದುಕಿಗಾಗಿ ಮಾಹಿತಿ ನೀಡಲು ಮಾ.8ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಈ ಜಾಗೃತಿ ಅಭಿಯಾನವನ್ನು ರಾಜಾಜಿನಗರದಲ್ಲಿರುವ ಡಾ.ರಮೇಶ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ 23151873ಗೆ ಸಂಪರ್ಕಿಸಬಹುದು. ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ ಮದರ್ಹುಡ್ ಆಸ್ಪತ್ರೆಯೂ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ. ಹೆಸರು ನೋಂದಾಯಿಸಲು 2519 0000 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.